Tuesday, 17th September 2024

ತಾರಾಪುರದಲ್ಲಿ ಪಾಕಿಸ್ತಾನದ ಬೇಹುಗಾರನ ಬಂಧನ

ಗುಜರಾತ್: ತಾರಾಪುರದಲ್ಲಿ ಗುಜರಾತ್ ಎಟಿಎಸ್ ಪಾಕಿಸ್ತಾನದ ಬೇಹುಗಾರನನ್ನು ಬಂಧಿಸಿದೆ.

ಪೊಲೀಸರ ಪ್ರಕಾರ, ಆರೋಪಿ ಲಾಭಶಂಕರ್ ಮಹೇಶ್ವರಿ ಮೂಲತಃ ಪಾಕಿಸ್ತಾನಿ ಹಿಂದೂ. 1999ರಲ್ಲಿ ತನ್ನ ಹೆಂಡತಿಯೊಂದಿಗೆ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದನು. ಆರಂಭದಲ್ಲಿ ಆತ ತಾರಾಪುರದಲ್ಲಿರುವ ಅತ್ತೆಯ ಮನೆಯಲ್ಲಿ ತಂಗಿದ್ದರು. ಅಲ್ಲಿ ಹಲವಾರು ಅಂಗಡಿಗಳನ್ನು ತೆರೆದು ಒಳ್ಳೆಯ ವ್ಯಾಪಾರ ಮಾಡುತ್ತಿದ್ದರು.

2006ರಲ್ಲಿ ಲಾಭಶಂಕರ್ ಭಾರತದ ಪೌರತ್ವ ಪಡೆದರು. 2022ರ ಆರಂಭದಲ್ಲಿ ತನ್ನ ಪೋಷಕರನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ತೆರಳಿದರು. ವೀಸಾ ಪ್ರಕ್ರಿಯೆಯಲ್ಲಿ ಮತ್ತು ಅವರ ಪೋಷಕರ ಮನೆಯಲ್ಲಿ ಒಂದೂವರೆ ತಿಂಗಳು ಇದ್ದಾಗ ಅಲ್ಲಿ ಬ್ರೈನ್ ವಾಶ್ ಮಾಡಲಾಗಿದೆ ಎಂದು ಆರೋಪಿಸ ಲಾಗಿದೆ.

ವಾಟ್ಸಾಪ್ ಖಾತೆ ರಚಿಸಿದ ನಂತರ ಆರೋಪಿಯು ಪಾಕಿಸ್ತಾನಕ್ಕೆ ಸಿಮ್ ಕಾರ್ಡ್ ಕಳುಹಿಸಿದ್ದ ಮತ್ತು ಅದಕ್ಕೆ ಪ್ರತಿಯಾಗಿ ಹಣ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಎಂಐ, ಗುಜರಾತ್ ಎಟಿಎಸ್ ಮತ್ತು ಏರ್ ಫೋರ್ಸ್ ಇಂಟೆಲಿಜೆನ್ಸ್ ಇದನ್ನು ದೊಡ್ಡ ಯಶಸ್ಸು ಎಂದು ಪರಿಗಣಿಸುತ್ತಿವೆ.

ಪೊಲೀಸರ ಪ್ರಕಾರ, ಆಗಸ್ಟ್ 15ರ ಮೊದಲು, ವಾಟ್ಸಾಪ್ ಸಂಖ್ಯೆಯ ಮೂಲಕ, ಭದ್ರತಾ ಪಡೆಗಳ ಸಿಬ್ಬಂದಿಯ ಆಂಡ್ರಾಯ್ಡ್ ಮೊಬೈಲ್ ಹ್ಯಾಂಡ್ಸೆಟ್ಗಳಲ್ಲಿ ‘ಹರ್ ಘರ್ ತಿರಂಗ ಅಭಿಯಾನ’ ಹೆಸರಿನಲ್ಲಿ ‘apk’ ಆಂಡ್ರಾಯ್ಡ್ ಅಪ್ಲಿಕೇಶನ್ ಡೌನ್ಲೋಡ್ ಮಾಡುವಂತೆ ಸಂದೇಶ ಬಂದಿತ್ತು. ಇದಲ್ಲದೆ, ಜನರು ತಮ್ಮ ಮಗುವಿನೊಂದಿಗೆ ರಾಷ್ಟ್ರಧ್ವಜದ ಚಿತ್ರವನ್ನು ಅಪ್ಲೋಡ್ ಮಾಡಬೇಕು ಎಂದು ಸೇನಾ ಶಾಲೆಗಳ ಅಧಿಕಾರಿಗಳನ್ನು ಅನುಕರಿಸುವ ಮೂಲಕ ಆ ಸಂಖ್ಯೆಗಳಿಗೆ ಸಂದೇಶಗಳನ್ನು ಕಳುಹಿಸಲಾಗಿದೆ.

ಆರೋಪಿ ಲಾಭಶಂಕರ್ ಮಹೇಶ್ವರಿ ಈ ಭಾರತೀಯ ನಂಬರ್ ಅನ್ನು ಪಾಕಿಸ್ತಾನಿ ಗುಪ್ತಚರ ಸಂಸ್ಥೆಗೆ ನೀಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

Leave a Reply

Your email address will not be published. Required fields are marked *