Saturday, 14th December 2024

ಲಾಲು ಜಾಮೀನು ಅರ್ಜಿ ವಿಚಾರಣೆ ಡಿ.11ಕ್ಕೆ ಮುಂದೂಡಿಕೆ

ರಾಂಚಿ: ಬಹುಕೋಟಿ ಮೇವು ಹಗರಣ ಪ್ರಕರಣದ ದೋಷಿ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಜಾರ್ಖಂಡ್‌ ಹೈಕೋರ್ಟ್‌ ಡಿ.11ಕ್ಕೆ ಮುಂದೂಡಿದೆ.

1992-93ರಲ್ಲಿ ಚಾಯಿಬಾಸಾ ಖಜಾನೆಯಿಂದ ₹33.67 ಕೋಟಿ ಹಣವನ್ನು ಅಕ್ರಮವಾಗಿ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಅಧ್ಯಕ್ಷ ಲಾಲು ಸೇರಿದಂತೆ ಒಟ್ಟು 16 ಮಂದಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆ ಅವಧಿ ಯಲ್ಲಿ ಲಾಲು ಅವರೇ ಬಿಹಾರದ ಮುಖ್ಯಮುಂತ್ರಿ ಆಗಿದ್ದರು.