Saturday, 14th December 2024

ಇಂಗ್ಲಿಷ್ ಪರೀಕ್ಷೆ ಪತ್ರಿಕೆ ಸೋರಿಕೆ: 12 ಜನರ ಬಂಧನ

ಆಂಧ್ರಪ್ರದೇಶ : ನಂದ್ಯಾಲ್ ಮತ್ತು ಶ್ರೀ ಸತ್ಯಸಾಯಿ ಜಿಲ್ಲೆಗಳಲ್ಲಿ ಶುಕ್ರವಾರ ಇಂಗ್ಲಿಷ್ ಪರೀಕ್ಷೆ ಪತ್ರಿಕೆಗಳು ಸೋರಿಕೆಯಾಗಿ, ಕರ್ನೂಲ್, ರೇಂಜ್ ಪೊಲೀಸರು 9 ಶಿಕ್ಷಕರು ಸೇರಿದಂತೆ 12 ಜನರನ್ನು ಬಂಧಿಸಿದ್ದಾರೆ.

ನಾರಾಯಣ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕನನ್ನೂ ಪೊಲೀಸರು ಬಂಧಿಸಿದ್ದಾರೆ. ನಂದ್ಯಾಲ ಜಿಲ್ಲೆಯ ನಂದಿ ಕೋಟ್ಕೂರಿನ ಗಾಂಧಿ ಸ್ಮಾರಕ ಪ್ರೌಢಶಾಲೆಯಲ್ಲಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದು ಪ್ರಸಾರ ವಾಗಿವೆ. ಶಾಲೆಯ ಅಟೆಂಡರ್ ಕೂಡ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚೆಗೆ ಕರ್ನೂಲ್ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ ಎಸ್‌ಎಸ್‌ಸಿ ಪರೀಕ್ಷೆಯ ಮೊದಲ ದಿನವೇ ತೆಲುಗು ಪರೀಕ್ಷೆಯ ಪತ್ರಿಕೆಗಳು ಸೋರಿಕೆಯಾಗಿದ್ದವು.