Friday, 29th March 2024

ಪುಲ್ವಾಮಾ: 30 ಕೆಜಿ ತೂಕದ ಸುಧಾರಿತ ಸ್ಫೋಟಕ ಪತ್ತೆ

ಶ್ರೀನಗರ: ಪುಲ್ವಾಮಾದ ತಹಾಬ್ ಕ್ರಾಸಿಂಗ್ ಬಳಿ ಸುಮಾರು 25 ರಿಂದ 30 ಕೆಜಿ ತೂಕದ ಸುಧಾರಿತ ಸ್ಫೋಟಕವನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹಾಗೂ ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳ ಲಾಗಿದೆ.

ನಿರ್ದಿಷ್ಟ ಮಾಹಿತಿ ಆಧರಿಸಿ ನಡೆದ ಪೊಲೀಸರ ದಾಳಿ ವೇಳೆ ದೊಡ್ಡ ದುರಂತ ವನ್ನು ತಪ್ಪಿಸಲಾಗಿದೆ ಎಂದು ಕಾಶ್ಮೀರ ಎಡಿಜಿಪಿ ವಿಜಯ್ ಕುಮಾರ್ ತಿಳಿಸಿ ದ್ದಾರೆ. ಬುದ್ಗಾಮ್‌ನ ವಾಟರ್‌ಹೈಲ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆಯುತ್ತಿದೆ.

ಉಧಮ್‌ಪುರ-ಕತ್ರಾ ರೈಲ್ವೆ ಹಳಿಗಳ ಉದ್ದಕ್ಕೂ ಮತ್ತು ಉಧಮ್‌ಪುರ ರೈಲು ನಿಲ್ದಾಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಸ್ವಾತಂತ್ರ್ಯ ದಿನದ ಮುನ್ನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ಶ್ವಾನ ಪಡೆ, ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಮತ್ತು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 

error: Content is protected !!