Wednesday, 11th December 2024

ಮುದಾಸೀರ್ ಪಂಡಿತ್ ಸೇರಿ ಮೂವರು ಉಗ್ರರ ಹತ್ಯೆ

ಶ್ರೀನಗರ್: “ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರ ಮುದಾಸೀರ್ ಪಂಡಿತ್ ಸೇರಿದಂತೆ ಮೂವರು ಉಗ್ರರನ್ನು ಹೊಡೆದುರು ಳಿಸಲಾಗಿದೆ. ಬಾರಾಮುಲ್ಲಾ ಜಿಲ್ಲೆಯ ಸೊಪೋರ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಮೃತಪಟ್ಟಿದ್ದಾರೆ.

ಉತ್ತರ ಕಾಶ್ಮೀರ ಜಿಲ್ಲೆ ಸೊಪೋರ ಪ್ರದೇಶದ ಬ್ರಾಂತ್ ಬಳಿ ಎನ್‌ಕೌಂಟರ್ ನಡೆಸಲಾಗಿದೆ ಎಂದು ಕಾಶ್ಮೀರ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್  ತಿಳಿಸಿದ್ದಾರೆ. ಮುದಾಸೀರ್ ಪಂಡಿತ್ ಸೇರಿದಂತೆ ಮೂವರು ಉಗ್ರರು ಅಡಗಿರುವ ಕುರಿತು ಮಾಹಿತಿ ಆಧರಿಸಿ ಭದ್ರತಾ ಸಿಬ್ಬಂದಿಯು ಶೋಧ ಕಾರ್ಯಾಚರಣೆ ಆರಂಭಿ ಸಿತು.

ಮೂವರು ಪೊಲೀಸ್ ಸಿಬ್ಬಂದಿ, ಇಬ್ಬರು ಕೌನ್ಸಿಲರ್ ಹಾಗೂ ಇಬ್ಬರು ನಾಗರಿಕರ ಕೊಲೆ ಸೇರಿದಂತೆ ಹಲವು ಉಗ್ರವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಎಂದು ಐಜಿಪಿ ಟ್ವೀಟ್ ಮಾಡಿದ್ದಾರೆ.