Friday, 13th December 2024

ಪೆಗಾಸಸ್ ಹಗರಣದ ಕುರಿತು ತನಿಖೆ ನಡೆಯಲಿ: ನಿತೀಶ್ ಕುಮಾರ್

ಪಾಟ್ನಾ: ತೀವ್ರ ಚರ್ಚೆಗೆ ಕಾರಣವಾಗಿರುವ ಪೆಗಾಸಸ್ ಹಗರಣದ ಕುರಿತು ತನಿಖೆ ನಡೆಸುವಂತೆ, ವಿರೋಧ ಪಕ್ಷಗಳ ಹೋರಾಟಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬೆಂಬಲ ಸೂಚಿಸಿದ್ದಾರೆ.

ಸೋಮವಾರ ‘ಪೆಗಾಸಸ್ ಸ್ನೂಪಿಂಗ್ ಹಗರಣ’ದ ಕುರಿತು ಮಾತನಾಡಿ, ಜನರಿಗೆ ಕಿರುಕುಳ ನೀಡಲು ಇಂತಹ ಕೆಲಸಗಳನ್ನು ಮಾಡಬಾರದು. ಇಡೀ ವಿಷಯವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು” ಎಂದು ಒತ್ತಾಯಿಸಿ ದ್ದಾರೆ.

ಪೆಗಾಸಸ್ ಪ್ರಕರಣವನ್ನು ಖಂಡಿತವಾಗಿಯೂ ಇದು ತನಿಖೆ ಆಗಬೇಕು” ಎಂದು ಹೇಳಿರುವ ನಿತೀಶ್ ಕುಮಾರ್, ಸಂಸತ್ತಿನಲ್ಲಿ ಈ ವಿಷಯ ಪ್ರಸ್ತಾಪವಾಗುತ್ತಿದೆ ಹಾಗೂ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಹಾಗಾಗಿ ಖಂಡಿತ ವಾಗಿಯೂ ಇದನ್ನು ಚರ್ಚಿಸಬೇಕು ಹಾಗೂ ಅದರತ್ತ ಗಮನ ನೀಡಬೇಕು. ಎಲ್ಲವನ್ನೂ ಬಹಿರಂಗ ಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.

ಇನ್ನು ಪೆಗಾಸಸ್ ತಂತ್ರಾಂಶ ಮೂಲಕ ಬೇಹುಗಾರಿಕೆ ನಡೆಸಲಾಗಿದೆ ಎನ್ನುವ ಆರೋಪ ಕೇಂದ್ರ ಸರ್ಕಾರ ವಿರುದ್ಧ ಕೇಳಿ ಬಂದಿದೆ. ವಿರೋಧ ಪಕ್ಷಗಳು ಈ ಕುರಿತು ಕೇಂದ್ರದ ವಿರುದ್ಧ ಹೋರಾಟ ನಡೆಸಿವೆ. ಪೆಗಾಸಸ್ ಕುರಿತು ತನಿಖೆ ನಡೆಯಬೇಕೆಂದು ಒತ್ತಾಯಿಸುತ್ತಿವೆ.