Friday, 1st December 2023

ಅಗ್ನಿ ದುರಂತ: ಲಕ್ನೋದ ಲೆವಾನಾ ಸೂಟ್ಸ್ ಹೋಟೆಲ್ ನೆಲಸಮ…?

ಕ್ನೋ: ಅಗ್ನಿ ದುರಂತದಲ್ಲಿ ನಾಲ್ವರು ಮೃತಪಟ್ಟ ಮತ್ತು ಕನಿಷ್ಠ 10 ಮಂದಿ ಗಾಯಗೊಂಡ ಲಕ್ನೋದ ಲೆವಾನಾ ಸೂಟ್ಸ್ ಹೋಟೆಲನ್ನು ನೆಲಸಮ ಮಾಡ ಲಾಗುವುದು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹೋಟೆಲ್‌ ನ ಇಬ್ಬರು ಮಾಲೀಕರು ಮತ್ತು ಅದರ ಜನರಲ್ ಮ್ಯಾನೇಜರ್‌ ಗಳನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆ ದಿದ್ದಾರೆ. ನಾಲ್ಕು ಅಂತಸ್ತಿನ ಕಟ್ಟಡವನ್ನು ಮಂಗಳವಾರ ಸೀಲ್ ಮಾಡಲಾಗುವುದು ಎಂದು ಲಕ್ನೋ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಇಂದ್ರಮಣಿ ಹೇಳಿದ್ದಾರೆ.

ಹಜರತ್‌ ಗಂಜ್‌ ನಲ್ಲಿರುವ ಮದನ್ ಮೋಹನ್ ಮಾಳವಿಯಾ ಮಾರ್ಗದಲ್ಲಿ ರುವ ಲೆವಾನಾ ಸೂಟ್ಸ್‌ ನ ಬೆಂಕಿ ನಂದಿಸಲು ಆರು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡಿದ್ದು, ಮೃತರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಲಿಕರಾದ ರಾಹುಲ್ ಅಗರ್ವಾಲ್, ರೋಹಿತ್ ಅಗರ್ವಾಲ್, ಪವನ್ ಅಗರ್ವಾಲ್ ಮತ್ತು ಹೋಟೆಲ್ ಜನರಲ್ ಮ್ಯಾನೇಜರ್ ಸಾಗರ್ ಶ್ರೀವಾಸ್ತವ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

error: Content is protected !!