Saturday, 14th December 2024

ಭಾರತೀಯ ಜೀವ ವಿಮಾ ನಿಗಮದ ಷೇರು ಕುಸಿತ

ನವದೆಹಲಿ: ಭಾರಿ ನಿರೀಕ್ಷೆಯೊಂದಿಗೆ ಷೇರುಮಾರುಕಟ್ಟೆಗೆ ಪ್ರವೇಶಿಸಿದ್ದ ಭಾರತೀಯ ಜೀವ ವಿಮಾ ನಿಗಮದ ಷೇರುಗಳು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿ ದಿದ್ದು ಹೂಡಿಕೆದಾರರು ಭಾರಿ ನಷ್ಟ ಅನುಭವಿಸಿದ್ದಾರೆ.

ಎಲ್‌ಐಸಿ ಷೇರು ಬೆಲೆ ಸೋಮವಾರದ ದಿನದಾಂತ್ಯಕ್ಕೆ 800 ರೂಪಾಯಿಗಿಂತ ಕಡಿಮೆಯಾಗಿ, 776.50 ರೂಪಾಯಿಯಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ. ಷೇರಿನ ಐಪಿಒ ವಿತರಣೆ ಬೆಲೆ 949 ರೂಪಾಯಿಗಳಿಗೆ ಹೋಲಿಸಿದರೆ ಸದ್ಯದ ಬೆಲೆ ಶೇ.23.75ಕ್ಕಿಂತ ಕಡಿಮೆಯಾಗಿವೆ.

ಷೇರುಗಳ ಬೆಲೆಯಲ್ಲಿನ ಕುಸಿತದೊಂದಿಗೆ ಎಲ್‌ಐಸಿ ಮಾರುಕಟ್ಟೆ ಮೌಲ್ಯ 5 ಲಕ್ಷ ಕೋಟಿ ರೂಪಾಯಿಗಳಿಗಿಂತ ಕೆಳಕ್ಕಿಳಿದು, 4.92 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಐಪಿಒದಲ್ಲಿ ಷೇರು ವಿತರಣೆ ವೇಳೆ ಎಲ್‌ಐಸಿ ಮಾರು ಕಟ್ಟೆ ಮೌಲ್ಯ 6,00,242 ಕೋಟಿ ರೂಪಾಯಿಗಳಷ್ಟಿತ್ತು. ಇದುವರೆಗೂ ಕಂಪನಿ ಮೌಲ್ಯ 1.08 ಲಕ್ಷ ಕೋಟಿ ಕಡಿಮೆಯಾಗಿದೆ. ಈ ಕುಸಿತದೊಂದಿಗೆ ಎಲ್‌ಐಸಿ ಸದ್ಯ ಅತ್ಯಮೂಲ್ಯ ಕಂಪನಿ ರ್‍ಯಾಂಕಿಂಗ್‌ನಲ್ಲಿ ಏಳನೇ ಸ್ಥಾನ ದಲ್ಲಿದೆ.

2022ರ ಮೇ.17 ರಂದು ಎಲ್‌ಐಸಿ ಷೇರುಗಳು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲ್ಪಟ್ಟಿದ್ದವು. ಷೇರುಗಳು ಮಾರು ಕಟ್ಟೆಯಲ್ಲಿ ಸಂಚಲನ ಮೂಡಿಸುತ್ತವೆ. ದೀರ್ಘಾ ವಧಿಯ ನಿರೀಕ್ಷೆ ಮತ್ತು ಗಾತ್ರದಲ್ಲಿ ತೀವ್ರ ಕಡಿತದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ತೀವ್ರ ಬೇಡಿಕೆ ಸೃಷ್ಟಿಯಾಗಬಹುದು ಎನ್ನಲಾಗಿತ್ತು.

ನಿರೀಕ್ಷೆಯೊಂದಿಗೆ ಮಾರುಕಟ್ಟೆಗೆ ಬಂದ ಷೇರುಗಳು ಪ್ರಾರಂಭದಿಂದಲೇ ನಿರಂತರ ಕುಸಿತ ಕಾಣುತ್ತಿವೆ. ಎಲ್‌ಐಸಿ ಕಂಪನಿಯ ಗಾತ್ರ, ಉದ್ಯಮದಲ್ಲಿನ ಪ್ರಾಬಲ್ಯ ಮತ್ತು ಅದರ ಪರಂಪರೆಯೇ ಷೇರಿನ ಬೆಲೆ ಏರಿಕೆಗೆ ಅಡಚಣೆಗಳಾಗಿ ಮುಂದುವರಿಯುತ್ತವೆ ಎಂದು ಹೇಳಿದೆ.