Friday, 13th December 2024

ಮೀಡಿಯಾ ಒನ್ ಪರವಾನಗಿ ರದ್ದು ನಿರ್ಧಾರಕ್ಕೆ ಅಸ್ತು

ತಿರುವನಂತಪುರಂ: ಮಲಯಾಳಂ ಸುದ್ದಿ ವಾಹಿನಿ ಮೀಡಿಯಾ ಒನ್ ಪ್ರಸಾರಕ್ಕೆ ನೀಡಿದ ಪರವಾನಗಿ ರದ್ದು ಪಡಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಕೇರಳ ಹೈಕೋರ್ಟ್ ಎತ್ತಿ ಹಿಡಿದಿದೆ.

ಕೇಂದ್ರ ಗೃಹ ಸಚಿವಾಲಯದ ದಾಖಲೆಗಳನ್ನು ಪರಿಶೀಲಿಸಿದಾಗ ಬೇಹು ಇಲಾಖೆಗಳಿಂದ ಬಂದಿರುವ ಮಾಹಿತಿಗಳು ಚಾನಲ್ ಗೆ ಸುರಕ್ಷತಾ ಪರವಾನಗಿ ನೀಡದೆ ಇರುವ ಸಚಿವಾಲಯದ ನಿರ್ಧಾರವನ್ನು ಸಮರ್ಥಿಸುತ್ತವೆ ಎಂದು ನ್ಯಾ.ಎನ್ ನಗರೇಶ್ ಹೇಳಿದ್ದಾರೆ.

ಸಚಿವಾಲಯದ ಕಡತಗಳನ್ನು ನೋಡಿದಾಗ ಸುರಕ್ಷತಾ ಪರವಾನಗಿ ನೀಡುವ ಬಗ್ಗೆ ಇಲಾಖೆ ಬೇಹು ಸಂಸ್ಥೆ ಗಳಿಂದ ಮಾಹಿತಿ ಕೇಳಿತ್ತು. ಅಲ್ಲಿಂದ ಬಂದಿರುವ ಮಾಹಿತಿಗಳನ್ನು ಗಮನಿಸಿ ಸುರಕ್ಷತಾ ಪರವಾನಗಿ ನೀಡದಂತೆ ಇಲಾಖೆಯ ಅಧಿಕಾರಿಗಳ ಸಮಿತಿ ನಿರ್ಧರಿಸಿದೆ. ಆದ್ದರಿಂದ ಚಾನಲ್ ನ ರಿಟ್ ಅರ್ಜಿಯನ್ನು ತಾನು ವಜಾ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.