Friday, 13th December 2024

ಲಿಂಕ್ಡ್‌ಇನ್’ನಿಂದ ಐಡೆಂಟಿಟಿ ವೆರಿಫಿಕೇಶನ್ ಸೌಲಭ್ಯ ಆರಂಭ

ನವದೆಹಲಿ: ಲಿಂಕ್ಡ್‌ಇನ್ ಭಾರತೀಯ ಬಳಕೆದಾರರಿಗಾಗಿ ಐಡೆಂಟಿಟಿ ವೆರಿಫಿಕೇಶನ್ (ಗುರುತಿನ ಪರಿಶೀಲನೆ) ಸೌಲಭ್ಯವನ್ನು ಆರಂಭಿಸಿದೆ.

“ಐಡೆಂಟಿಟಿ ವೆರಿಫಿಕೇಶನ್ ಎಂದರೆ ವ್ಯಕ್ತಿಯೊಬ್ಬರಿಗೆ ಸರ್ಕಾರದಿಂದ ನೀಡಲಾದ ಐಡಿ ದಾಖಲೆಯನ್ನು ಲಿಂಕ್ಡ್‌ ಇನ್‌ನ ಪರಿಶೀಲನಾ ಪಾರ್ಟನರ್​ ಒಬ್ಬರು ಪರಿಶೀಲಿಸುವುದು ಎಂದರ್ಥ” ಎಂದು ಲಿಂಕ್ಡ್‌ಇನ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಅಶುತೋಷ್ ಗುಪ್ತಾ ಬುಧವಾರ ತಿಳಿಸಿದ್ದಾರೆ.

ಹೈಪರ್ ವರ್ಜ್ ಕಂಪನಿಯು, ಭಾರತ ಸರ್ಕಾರದ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ಗುರುತಿನ ದಾಖಲೆಗಳನ್ನು ಪರಿಶೀಲಿಸುವ ಡಿಜಿಲಾಕರ್ ಆನ್ಲೈನ್ ವ್ಯಾಲೆಟ್​ ಮೂಲಕ ಲಿಂಕ್ಡ್​ ಇನ್ ಗಾಗಿ ಬಳಕೆದಾರರ ಐಡೆಂಟಿಟಿ ವೆರಿಫಿ ಕೇಶನ್ ಸೇವೆ ನೀಡಲಿದೆ. ಮಾನ್ಯವಾದ ಆಧಾರ್ ಸಂಖ್ಯೆ ಮತ್ತು ಭಾರತೀಯ ಫೋನ್ ನಂಬರ್ ಅನ್ನು ಹೊಂದಿ ರುವ ಬಳಕೆದಾರರು ತಮ್ಮ ಐಡಿಯನ್ನು ವೆರಿಫಿಕೇಶನ್ ಮಾಡಿಸಿಕೊಳ್ಳಬಹುದು.

ಆಧಾರ್ ಹೊಂದಿಲ್ಲದಿದ್ದರೆ ಲಿಂಕ್ಡ್‌ಇನ್‌ನಲ್ಲಿ ಇತರ ವಿಧಾನಗಳನ್ನು ಬಳಸಿಕೊಂಡು ಐಡೆಂಟಿಟಿ ವೆರಿಫಿಕೇಶನ್ ಮಾಡಿಸಬಹುದು. ನಿಮ್ಮ ಕೆಲಸದ ಇಮೇಲ್ ಅಥವಾ ಕೆಲಸದ ದಾಖಲೆಗಳ ಮೂಲಕವೂ ನೀವು ಮಾಡಬಹುದು” ಎಂದು ಅವರು ತಿಳಿಸಿದ್ದಾರೆ. ಏಪ್ರಿಲ್‌ ತಿಂಗಳಲ್ಲಿ ಕಂಪನಿಯು ಅಮೆರಿಕ ದಲ್ಲಿ ಐಡಿ ವೆರಿಫಿಕೇಶನ್ ಸೌಲಭ್ಯವನ್ನು ಪ್ರಾರಂಭಿಸಿತ್ತು ಮತ್ತು ಶೀಘ್ರದಲ್ಲೇ ಈ ಸೌಲಭ್ಯವನ್ನು ಇತರ ದೇಶಗಳಲ್ಲೂ ಪರಿಚಯಿಸಲು ಯೋಜಿಸಿದೆ.

ಡಿಜಿಲಾಕರ್ ಎಂಬುದು ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿನ ಸರ್ಕಾರದ ಉಪಕ್ರಮವಾಗಿದೆ. ಡಾಕ್ಯುಮೆಂಟ್ ಅನ್ನು ಸಂಗ್ರಹಿಸಲು ಮತ್ತು ರುಜುವಾತುಗಳನ್ನು ಪರಿಶೀಲಿಸಲು ಬಳಸಲಾಗುತ್ತದೆ. ಡಿಜಿಲಾಕರ್​ನಲ್ಲಿ ನಿಮ್ಮ ಪ್ರಮುಖ ದಾಖಲೆಗಳಾದ ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಶಾಲೆಯ ಮಾರ್ಕ್‌ಶೀಟ್‌ಗಳು, ವಿಮೆ ಪೇಪರ್‌ಗಳು ಇತ್ಯಾದಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಬಹುದು.

ಲಿಂಕ್ಡ್​ ಇನ್ ಇದು ವಿಶ್ವದ ಅತಿದೊಡ್ಡ ವೃತ್ತಿಪರ ನೆಟ್‌ವರ್ಕಿಂಗ್ ವೇದಿಕೆಯಾಗಿದೆ. ಇದು 756 ಮಿಲಿಯನ್ ಸದಸ್ಯರನ್ನು ಹೊಂದಿರುವ ಅತ್ಯಂತ ಪ್ರಭಾವಶಾಲಿ ಸಾಮಾಜಿಕ ಮಾಧ್ಯಮ ನೆಟ್‌ವರ್ಕ್‌ಗಳಲ್ಲಿ ಒಂದಾಗಿದೆ. ಪ್ರಾಥಮಿಕ ಲಿಂಕ್ಡ್‌ಇನ್ ಖಾತೆಯು ಉಚಿತವಾಗಿದೆ.