ಗುಜರಾತ್: ಗುಜರಾತಿನ ಗಾಂಧಿ ನಗರದಲ್ಲಿರುವ ಗಿಫ್ಟ್ ಸಿಟಿಯಲ್ಲಿ ಮದ್ಯದ ಮೇಲಿನ ನಿಷೇಧವನ್ನು ತೆಗೆದು ಹಾಕಿದೆ.
ಮಹಾತ್ಮಾ ಗಾಂಧಿಯವರು ಜನಿಸಿದ ರಾಜ್ಯ ಗುಜರಾತ್ ರಚನೆಯಾದಾಗಿನಿಂದ ಅಲ್ಲಿ ಮದ್ಯ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ಸೇವನೆ ನಿಷೇಧಿಸಲಾಗಿದೆ. ಆದರೆ, ವ್ಯಾಪಾರದ ದೃಷ್ಟಿಯಿಂದ ಈ ನಿಯಮದಲ್ಲಿ ಸಡಿಲಿಕೆ ಮಾಡಿದೆ. ಇದು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿದೆ. ಜಾಗತಿಕ ವ್ಯಾಪಾರ ಪರಿಸರ ವ್ಯವಸ್ಥೆಯನ್ನು ಕಲ್ಪಿಸಲು ಗಿಫ್ಟ್ ಸಿಟಿ ಪ್ರದೇಶದಲ್ಲಿ `ವೈನ್ ಮತ್ತು ಡೈನ್’ ಸೌಲಭ್ಯಕ್ಕೆ ಅನುಮತಿ ನೀಡುವ ಮಹತ್ವದ ನಿರ್ಧಾರ ವನ್ನು ತೆಗೆದುಕೊಳ್ಳಲಾಗಿದೆ ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಸರ್ಕಾರದ ಆದೇಶದನ್ವಯ ಗಿಫ್ಟ್ ಸಿಟಿ ಪ್ರದೇಶದಲ್ಲಿರುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕ್ಲಬ್‌ಗಳಿಗೆ ವೈನ್ ಮತ್ತು ಡೈನ್ ಸೌಲಭ್ಯಕ್ಕೆ ಪರವಾನಗಿಗಳನ್ನು ನೀಡಲಾಗುತ್ತದೆ.
ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಸಂಸದ ಶಕ್ತಿ ಸಿನ್ಹಾ ಗೋಯಲ್ ವಿರೋಧಿಸಿದ್ದಾರೆ.
‘ಮದ್ಯ ಮಾರಾಟಕ್ಕೆ ಅವಕಾಶ ಇರುವ ರಾಜ್ಯಗಳಲ್ಲಿನ ಮಹಿಳೆಯರ ಸ್ಥಿತಿಯನ್ನು ಗಮನಿಸಿದರೆ, ಇದು ಸೃಷ್ಟಿಸಿದ ನರಕದ ದರ್ಶನವಾಗುತ್ತದೆ. ಮದ್ಯ ಸೇವನೆ ಕೇವಲ ಆರೋಗ್ಯವನ್ನು ಹಾಳು ಮಾಡುವುದಿಲ್ಲ. ಬದಲಿಗೆ ಸಮಾಜದ ಇಡೀ ವಾತಾವರಣವನ್ನೇ ಹಾಳುಗೆಡವುತ್ತದೆ. ಮದ್ಯ ಮಾರಾಟದಿಂದ ಬಂದ ಹಣದಿಂದ ಯಾವ ರಾಜ್ಯವೂ ಉದ್ದಾರವಾಗಿಲ್ಲ. ಮಹಾತ್ಮಾ ಗಾಂಧಿ, ಸರ್ಧಾರ್ ಪಟೇಲ್ ಅವರಂತಹ ಮಹನೀಯರು ಜನಿಸಿದ ನಾಡಿನಲ್ಲಿ ಇಂಥ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಬಾರದಿತ್ತು’ ಎಂದು ವಾಗ್ದಾಳಿ ನಡೆಸಿದ್ದಾರೆ.