Saturday, 14th December 2024

ಚಾಲನಾ ಪರವಾನಗಿ ಗಳಿಸಿದ ದೇಶದ ಮೊದಲ ಕುಬ್ಜ

ಹೈದರಾಬಾದ್: ಹೈದರಾಬಾದ್ ನಿವಾಸಿ ಗಟ್ಟಿಪಲ್ಲಿ ಶಿವಪಾಲ್ ಅವರು ಚಾಲನಾ ಪರವಾನಗಿ ಗಳಿಸಿದ ದೇಶದ ಮೊದಲ ಕುಬ್ಜ ರಾಗಿದ್ದಾರೆ.

ಮೂರು ಅಡಿ ಎತ್ತರದ 42 ವರ್ಷದ ವ್ಯಕ್ತಿ, ತನ್ನ ಅಂಗ ವೈಫಲ್ಯವನ್ನು ಧಿಕ್ಕರಿಸಿ ಕರೀಂನಗರದ ತನ್ನ ಪ್ರದೇಶದಲ್ಲಿ ಪದವಿ  ಪೂರ್ಣಗೊಳಿಸಿದ ಮೊದಲ ಅಂಗವಿಕಲ ವ್ಯಕ್ತಿ ಎನಿಸಿಕೊಂಡಿದ್ದಾರೆ. ಶಿವಪಾಲ್ 2004 ರಲ್ಲಿ ತಮ್ಮ ಅಧ್ಯಯನ ಪೂರ್ಣ ಗೊಳಿಸಿ ದರು.

ನನ್ನ ಎತ್ತರದ ಕಾರಣದಿಂದ ಜನರು ನನ್ನನ್ನು ಚುಡಾಯಿಸುತ್ತಿದ್ದರು ಮತ್ತು ಇಂದು ನಾನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ನಾಮನಿರ್ದೇಶನಗೊಂಡಿದ್ದೇನೆ. ಚಾಲನಾ ತರಬೇತಿಗಾಗಿ ಅನೇಕ ಕುಳ್ಳಗಿನ ಜನರು ನನ್ನನ್ನು ಸಂಪರ್ಕಿಸುತ್ತಿದ್ದಾರೆ. ದೈಹಿಕ ವಿಕಲ ಚೇತನರಿಗಾಗಿ ಮುಂದಿನ ವರ್ಷ ಡ್ರೈವಿಂಗ್ ಶಾಲೆಯನ್ನು ಪ್ರಾರಂಭಿಸಲು ನಿರ್ಧರಿಸಿ ದ್ದೇನೆ ಎಂದು ಹೇಳಿದರು.

‘ನಾನು ಕುಟುಂಬದಲ್ಲಿ ಏಕೈಕ ಕುಬ್ಜ’ ಎಂದು ಹೇಳಿದರು. ನಗರದಲ್ಲಿ ಬದುಕಲು ಉದ್ಯೋಗ ಹುಡುಕುವುದರೊಂದಿಗೆ ತನ್ನ ಹೋರಾಟ ವಿವರಿಸಿದ ಶಿವಪಾಲ್, ನಾನು ಆರಂಭದಲ್ಲಿ ಚಲನಚಿತ್ರ ಮತ್ತು ದೈನಂದಿನ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದೇನೆ.

ಸ್ನೇಹಿತರೊಬ್ಬರ ಮೂಲಕ ಖಾಸಗಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ಈಗ ಕಳೆದ 20 ವರ್ಷಗಳಿಂದ ಇಲ್ಲಿಯೇ ಕೆಲಸ ಮಾಡುತ್ತಿದ್ದೇನೆ ಎಂದರು. ‘ಪ್ರಯಾಣಕ್ಕಾಗಿ, ನಾನು ಕ್ಯಾಬ್‌ಗಳನ್ನು ಬುಕ್ ಮಾಡಿದಾಗಲೆಲ್ಲಾ ಅವರು ರೈಡ್ ಅನ್ನು ರದ್ದು ಗೊಳಿಸುತ್ತಿದ್ದರು.

ಡ್ರೈವಿಂಗ್ ಕಲಿಯಲು ಉತ್ಸುಕನಾಗಿದ್ದ ಶಿವಪಾಲ್ ಇಂಟರ್‌ನೆಟ್‌ನಲ್ಲಿ ಸರ್ಚ್ ಮಾಡಿದ್ದಾನೆ ಮತ್ತು ಯುಎಸ್‌ನಲ್ಲಿ ವ್ಯಕ್ತಿಯೊಬ್ಬರು ಅಪ್‌ಲೋಡ್ ಮಾಡಿದ ವೀಡಿಯೊವನ್ನು ನೋಡಿದ್ದಾರೆ. ಆಸನ ಮತ್ತು ಇತರ ಸಲಕರಣೆಗಳನ್ನು ತನ್ನ ಎತ್ತರಕ್ಕೆ ತಕ್ಕಂತೆ ಕಾರಿನಲ್ಲಿ ಬೇಕಾದ ಮಾರ್ಪಾಡುಗಳನ್ನು ಅದು ಅವನಿಗೆ ವಿವರಿಸಿತು. ಕಾರನ್ನು ಮಾರ್ಪಡಿಸಿದ ನಂತರ, ಶಿವಪಾಲ್ ಸ್ನೇಹಿತನಿಂದ ಕಾರ್ ಡ್ರೈವಿಂಗ್ ಕಲಿತರು.

ಅಧಿಕಾರಿಗಳಿಗೆ ಮನವಿ ಮಾಡಿದ ನಂತರ ಮೂರು ತಿಂಗಳ ಕಾಲ ಕಲಿಕಾ ಪರವಾನಿಗೆ ಪಡೆದು, ಪಕ್ಕದಲ್ಲಿ ಕುಳಿತ ಅಧಿಕಾರಿ ಯೊಂದಿಗೆ ಸರಿಯಾದ ಚಾಲನಾ ಪರೀಕ್ಷೆ ನಡೆಸಿ ಚಾಲಕ ಪರವಾನಗಿ ಪಡೆದಿದ್ದೇನೆ ಎಂದು ಶಿವಪಾಲ್ ಹೇಳಿದರು.