Friday, 13th December 2024

ಪಶುಪತಿ ಕುಮಾರ್ ಪರಾಸ್ – ನೂತನ ಎಲ್ ಜೆಪಿ ನಾಯಕ

ನವದೆಹಲಿ: ಚಿರಾಗ್ ಪಾಸ್ವಾನ್ ಅವರನ್ನು ಲೋಕ ಜನಶಕ್ತಿ ಪಕ್ಷದ (ಎಲ್ ಜೆಪಿ) ಮುಖ್ಯಸ್ಥ ಸ್ಥಾನದಿಂದ ತೆಗೆದು ಹಾಕಲಾಗಿದ್ದು, ಲೋಕಸಭಾ ಸಚಿವಾಲಯವು ಚಿರಾಗ್ ಬದಲಿಗೆ ಪಶುಪತಿ ಕುಮಾರ್ ಪರಾಸ್ ಅವರನ್ನ ನೂತನ ಎಲ್ ಜೆಪಿ ನಾಯಕರನ್ನಾಗಿ ಹೆಸರಿಸಿದೆ.

ಲೋಕಸಭೆಯ ಆರು ಲೋಕ ಜನಶಕ್ತಿ ಪಕ್ಷದ ಸಂಸದರಲ್ಲಿ ಐದು ಮಂದಿ ತಮ್ಮ ನಾಯಕ ಚಿರಾಗ್ ಪಾಸ್ವಾನ್ ವಿರುದ್ಧ ಕೈ ಜೋಡಿಸಿ, ಪಾಸ್ವಾನ್ ಅವರ ದಿವಂಗತ ತಂದೆ ಮತ್ತು ಪಕ್ಷದ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ಅವರ ಕಿರಿಯ ಸಹೋದರ ಪಶುಪತಿ ಕುಮಾರ್ ಪರಾಸ್ ಅವರನ್ನ ಅವರ ಸ್ಥಾನದಲ್ಲಿ ಆಯ್ಕೆ ಮಾಡಿದೆ.

‘ನನ್ನ ತಂದೆ ಮತ್ತು ಕುಟುಂಬ ಸ್ಥಾಪಿಸಿದ ಪಕ್ಷವನ್ನ ಒಟ್ಟಿಗೆ ಇರಿಸಲು ನಾನು ಪ್ರಯತ್ನಿಸಿದೆ. ಆದರೆ ವಿಫಲನಾದೆ. ಪಕ್ಷವು ತಾಯಿ ಯಂತಿದೆ ಮತ್ತು ಯಾರೂ ಅದಕ್ಕೆ ದ್ರೋಹ ಮಾಡಬಾರದು. ಪ್ರಜಾಪ್ರಭುತ್ವದಲ್ಲಿ ಜನರು ಸರ್ವೋಚ್ಚರಾಗಿದ್ದಾರೆ. ಪಕ್ಷದ ಮೇಲೆ ವಿಶ್ವಾಸವಿಡುವವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ’ ಎಂದು ಚಿರಾಗ್ ಪಾಸ್ವಾನ್ ಅವರು ಪಕ್ಷದ ಹುದ್ದೆಯಿಂದ ಹೊರ ಹಾಕಲ್ಪಟ್ಟ ನಂತರ ಬಿಟ್ಟು ಕೊಡದಿರುವ ತಮ್ಮ ನಿರ್ಧಾರವನ್ನ ಸೂಚಿಸಿದರು.