Monday, 9th December 2024

LK Advani birthday: ದೇಶದ ಅಭಿವೃದ್ದಿಗೆ ಎಲ್‌ಕೆ ಅಡ್ವಾಣಿ ಕೊಡುಗೆ ಅಪಾರ-ನರೇಂದ್ರ ಮೋದಿ!

PM Modi meets BJP leader LK Advani on his 97th birthday

ನವದೆಹಲಿ: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಉಪ ಪ್ರಧಾನಿ ಎಲ್‌ ಕೆ ಅಡ್ವಾಣಿಯವರ (LK Advani birthday) ನಿವಾಸಕ್ಕೆ ತೆರಳಿ 97ನೇ ಜನುಮ ದಿನಕ್ಕೆ ಶುಭಾಶಯಕವನ್ನು ಕೋರಿದ್ದಾರೆ. ಇದೇ ಮಾತನಾಡಿದ ಪಿಎಂ ಮೋದಿ, ತಮ್ಮ ರಾಜಕೀಯ ವೃತ್ತಿ ಜೀವನದಲ್ಲಿ ಎಲ್‌ಕೆ ಅಡ್ವಾಣಿ ಅವರು ದೇಶದ ಅಭಿವೃದ್ದಿಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆಂದು ಕೊಂಡಾಡಿದ್ದಾರೆ.

“ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಜನ್ಮದಿನದ ಶುಭಾಶಯಗಳು. ಈ ವರ್ಷ ಇನ್ನಷ್ಟು ವಿಶೇಷವಾಗಿದೆ ಏಕೆಂದರೆ ಈ ವರ್ಷ ಅವರು ರಾಷ್ಟ್ರಕ್ಕೆ ಮಾಡಿದ ಅತ್ಯುತ್ತಮ ಸೇವೆಗಾಗಿ ‘ಭಾರತ ರತ್ನ’ ಪ್ರಶಸ್ತಿಯನ್ನು ಪಡೆದಿದ್ದಾರೆ. ಭಾರತದ ಅತ್ಯಂತ ನೆಚ್ಚಿನ ರಾಜಕಾರಣಿಗಳಲ್ಲಿ ಒಬ್ಬರಾದ ಅಡ್ವಾಣಿ ಅವರು ದೇಶದ ಅಭಿವೃದ್ಧಿಯನ್ನು ಮುನ್ನಡೆಸಲು ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಅವರ ಬುದ್ಧಿವಂತಿಕೆ ಮತ್ತು ಶ್ರೀಮಂತ ಒಳನೋಟಗಳಿಗಾಗಿ ಅವರು ಯಾವಾಗಲೂ ಗೌರವಿಸಲ್ಪಟ್ಟಿದ್ದಾರೆ. ಹಲವು ವರ್ಷಗಳಿಂದ ಅವರ ಮಾರ್ಗದರ್ಶನ ಪಡೆದಿರುವುದು ನನ್ನ ಅದೃಷ್ಟ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಪ್ರಾರ್ಥಿಸುತ್ತೇನೆ,” ಎಂದು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಎಲ್‌ಕೆ ಅಡ್ವಾಣಿ ಅವರಿಗೆ 97 ವರ್ಷ

ಭಾರತ ರತ್ನ ಪುರಸ್ಕೃತ ಅಡ್ವಾಣಿ ದೇಶದ ಹಿರಿಯ ನಾಯಕರಲ್ಲಿ ಗಣತಿಯಾಗಿದ್ದಾರೆ. ಅವರು ಶುಕ್ರವಾರ (ನವೆಂಬರ್‌ ೮) 97ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಡ್ವಾಣಿ 1927 ರಲ್ಲಿ ಕರಾಚಿಯಲ್ಲಿ (ಇಂದಿನ ಪಾಕಿಸ್ತಾನ) ಜನಿಸಿದ್ದರು. 2002ರಿಂದ 2004ರವರೆಗೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಉಪಪ್ರಧಾನಿಯಾಗಿದ್ದರು. ಅಡ್ವಾಣಿ ತಮ್ಮ ರಾಜಕೀಯ ಜೀವನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸ್ವಯಂ ಸೇವಕರಾಗಿ ಪ್ರಾರಂಭಿಸಿದರು. 2015ರಲ್ಲಿ ಅಡ್ವಾಣಿ ಅವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣವನ್ನು ನೀಡಲಾಗಿತ್ತು.

“ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ, ಭಾರತದ ಮಾಜಿ ಪ್ರಧಾನ ಮಂತ್ರಿ ಹಾಗೂ ಭಾರತ ರತ್ನ ಗೌರವಕ್ಕೆ ಭಾಜನರಾಗಿರುವ ಲಾಲ್‌ ಕೃಷ್ಣ ಅಡ್ವಾಣಿ ಅವರ ನಿವಾಸಕ್ಕೆ ತೆರಳಿದ್ದು, ಅವರ 97ನೇ ಜನುಮ ದಿನಕ್ಕೆ ಶುಭಾಶಯ ಕೋರಿದ್ದೇನೆ. ದೀರ್ಘಾವಧಿ ಇವರಿಗೆ ದೇವರು ಉತ್ತಮ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ,” ಎಂದು ಬಿಜೆಪಿ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಟ್ವೀಟ್‌ ಮಾಡಿದ್ದಾರೆ.

ಅಡ್ವಾಣಿಗೆ ಶುಭಾಶಯ ಕೋರಿದ ಹರಿಯಾಣ ಸಿಎಂ

“ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ, ಬಿಜೆಪಿ ಕುಟುಂಬದ ಸಂಸ್ಥಾಪಕ, ಮತ್ತು ತಮ್ಮ ಸಮರ್ಪಣೆ ಮತ್ತು ತತ್ವಗಳ ಮೂಲಕ ಕೋಟಿಗಟ್ಟಲೆ ಕಾರ್ಯಕರ್ತರಿಗೆ ಮಾದರಿಯಾದ ಭಾರತ ರತ್ನ, ಗೌರವಾನ್ವಿತ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಭೇಟಿಯಾಗಿ ಅವರ ಜನುಮ ದಿನಕ್ಕೆ ಶುಭಾಶಯ ಕೋರಿದ್ದೇನೆ. ನೀವು ದೀರ್ಘಾವಧಿ ಬದುಕಿ, ಆರೋಗ್ಯಕರವಾಗಿದ್ದು ನಮಗೆ ಸದಾ ಮಾರ್ಗದರ್ಶನ ನೀಡುತ್ತಿರಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ,” ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸೈನಿ ಟ್ವೀಟ್‌ ಮಾಡಿದ್ದಾರೆ.

ಈ ಸುದ್ದಿಯನ್ನು ಓದಿ: Narendra Modi: ಕರೆ ಮಾಡಿ ಟ್ರಂಪ್‌ಗೆ ಅಭಿನಂದನೆ ಸಲ್ಲಿಸಿದ ಮೋದಿ; ಉಭಯ ನಾಯಕರ ಸಂಭಾಷಣೆ ಹೇಗಿತ್ತು?