Friday, 13th December 2024

ಲಾಕ್’ಡೌನ್ ಎಫೆಕ್ಟ್: ನಷ್ಟ ತುಂಬಿಕೊಳ್ಳಲು ಲಾಭವಿಲ್ಲದ ರೈಲು ಸಂಚಾರ ರದ್ದು!

 ನವದೆಹಲಿ: ಲಾಕ್ ಡೌನ್ ಅವಧಿಯಲ್ಲಾದ ನಷ್ಟ ತುಂಬಿಕೊಳ್ಳಲು ಭಾರತೀಯ ರೈಲ್ವೆ  ಹೊಸ ವೇಳಾಪಟ್ಟಿ ಸಿದ್ದಪಡಿಸಿದ್ದು, ಡಿ.1ರಿಂದ ಈ ವೇಳಾಪಟ್ಟಿ ಜಾರಿಗೆ ಬರಲಿದೆ.

ಪ್ರತಿ ವರ್ಷ ಕನಿಷ್ಠ 2 ಸಾವಿರ ಕೋಟಿ ಆದಾಯ ಬರುವಂತೆ ಮಾಡಲು ರೈಲ್ವೆ ಯೋಜನೆ ರೂಪಿಸುತ್ತಿದೆ. ಇದಕ್ಕಾಗಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಗೂ ಲಾಭವಿಲ್ಲದ ಮಾರ್ಗದಲ್ಲಿ ರೈಲು ಸಂಚಾರ ರದ್ದುಗೊಳಿಸಲಿದೆ. ಎಂದರೆ, 600 ಪ್ಯಾಸೆಂಜರ್ ರೈಲುಗಳ ಸಂಚಾರ ರದ್ದು ಗೊಳ್ಳಲಿದೆ. 1600 ರಾತ್ರಿ ನಿಲ್ದಾಣಗಳನ್ನು ರದ್ದು ಮಾಡಲಾಗುತ್ತದೆ.

ಈ ಬದಲಾವಣೆ ಇದೇ ಮೊದಲ ಬಾರಿಗೆ ಜಾರಿಗೆ ಬರುತ್ತಿದ್ದು, ನಷ್ಟದಲ್ಲಿನ ಮಾರ್ಗವನ್ನು ರೈಲ್ವೆ ಇಲಾಖೆ ರದ್ದು ಮಾಡುತ್ತಿದೆ.

ಯಾವ ಮಾರ್ಗದ ರೈಲು ರದ್ದು ಮಾಡಬಹುದು, ಯಾವ ನಿಲ್ದಾಣದಲ್ಲಿ ನಿಲುಗಡೆ ಸ್ಥಗಿತ ಗೊಳಿಸಬಹುದು ಎಂದು ವಲಯಗಳು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿವೆ. ಹೊಸ ರೈಲು ವೇಳಾ ಪಟ್ಟಿ ಜಾರಿಗೆ ಬಂದ ಕೂಡಲೇ ಇದು ಅನುಷ್ಠಾನಕ್ಕೆ ಬರಲಿದೆ. ಮೇ ತಿಂಗಳಿ ನಲ್ಲಿ ಶ್ರಮಿಕ್ ವಿಶೇಷ ರೈಲುಗಳ ಸಂಚಾರವನ್ನು ರೈಲ್ವೆ ಇಲಾಖೆ ಆರಂಭಿಸಿತು. ಬೇಡಿಕೆ ಇರುವ ಮಾರ್ಗದಲ್ಲಿ ಮಾತ್ರ ವಿಶೇಷ ರೈಲುಗಳನ್ನು ರೈಲ್ವೆ ಓಡಿಸುತ್ತಿದೆ. ಎಲ್ಲಾ ರೈಲುಗಳ ಸಂಚಾರ ಡಿಸೆಂಬರ್‌ನಲ್ಲಿ ಆರಂಭಗೊಳ್ಳುವ ನಿರೀಕ್ಷೆ ಇದೆ.

ಸೆಪ್ಟೆಂಬರ್‌ನಲ್ಲಿ ರೈಲ್ವೆ 80 ವಿಶೇಷ ರೈಲುಗಳನ್ನು ಓಡಿಸಲು ಆರಂಭಿಸಿತು.