Wednesday, 11th December 2024

ಜೂ.20 ರಿಂದ ಈ ರಾಜ್ಯದಲ್ಲಿ ಮಾತ್ರ ಲಾಕ್ ಡೌನ್ ತೆರವು ?

ಹೈದರಾಬಾದ್: ಕರೋನಾ ಸೋಂಕು ಪ್ರಕರಣ ಇಳಿಕೆಯಾಗುತ್ತಿದ್ದ ಬೆನ್ನಲ್ಲೇ ತೆಲಂಗಾಣ ಸರ್ಕಾರ ಜೂ.19ರ ರಾತ್ರಿಯಿಂದ ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೊಳಿಸಿರುವ ಕೋವಿಡ್ ಲಾಕ್ ಡೌನ್ ತೆರವುಗೊಳಿಸುವುದಾಗಿ ಘೋಷಿಸಿದೆ.

ಸೋಂಕು ಪ್ರಕರಣ ತೀವ್ರಗತಿಯಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿಯಾಗಿದೆ.

ಲಾಕ್ ಡೌನ್ ತೆರವಿಗೂ ಮುನ್ನ ಬೆಳಗ್ಗೆ 6ಗಂಟೆಯಿಂದ 5ಗಂಟೆವರೆಗೆ ಕೆಲವೊಂದು ನಿರ್ಬಂಧ ಸಡಿಲಿಕೆ ಮಾಡುವುದಾಗಿ ಘೋಷಿಸಿತ್ತು. ಸಂಜೆ 6ಗಂಟೆವರೆಗೆ ಕಚೇರಿಯಿಂದ ಮನೆಗಳಿಗೆ ತೆರಳಲು ಜನರಿಗೆ ಅವಕಾಶ ಕಲ್ಪಿಸಿಕೊಟ್ಟಿರುವುದಾಗಿ ತಿಳಿಸಿದೆ.

ಭಾನುವಾರದಿಂದ ರಾಜ್ಯದಲ್ಲಿನ ಕೋವಿಡ್ ಲಾಕ್ ಡೌನ್ ನಿರ್ಬಂಧ ರದ್ದುಗೊಳ್ಳಲಿದೆ. ಭಾನುವಾರವೂ ಎಲ್ಲಾ ವ್ಯಾಪಾರ, ವಹಿವಾಟುಗಳಿಗೆ ಅವಕಾಶ ನೀಡಲಾಗುವುದು ಎಂದು ವರದಿ ತಿಳಿಸಿದೆ.