Saturday, 14th December 2024

ಲೋಕಸಭೆ ಚುನಾವಣೆಗೆ ತಾತ್ಕಾಲಿಕ ದಿನಾಂಕ ಪ್ರಕಟ

ನವದೆಹಲಿ: ಲೋಕಸಭೆ 2024 ರ ಚುನಾವಣೆಯನ್ನು ಏಪ್ರಿಲ್ 16 ರಂದು ತಾತ್ಕಾಲಿಕವಾಗಿ ನಡೆಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕೇಂದ್ರ ಚುನಾವಣಾ ಆಯೋಗ ಪತ್ರ ಬರೆದಿದೆ.
ಚುನಾವಣಾ ಯೋಜಕರ ಪ್ರಾರಂಭ ಮತ್ತು ಅಂತಿಮ ದಿನಾಂಕಗಳನ್ನು ಲೆಕ್ಕಾಚಾರ ಮಾಡಲು ಚುನಾವಣಾ ಆಯೋಗ ಅಧಿಕಾರಿಗಳಿಗೆ ಅನುವು ಮಾಡಿ ಕೊಡಲು, ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ತಾತ್ಕಾಲಿಕ ದಿನಾಂಕವನ್ನು ಘೋಷಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.