Tuesday, 10th September 2024

ಲೋಕಸಭಾ ಚುನಾವಣೆಗೆ ಆಪ್ ಪಕ್ಷದ್ದು ಏಕಾಂಗಿ ಹೋರಾಟ

ವದೆಹಲಿ: ಮೈತ್ರಿ ಮಾಡಿಕೊಳ್ಳದೇ ಗುಜರಾತ್, ಹರಿಯಾಣ ಮತ್ತು ಗೋವಾದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಆಮ್ ಆದ್ಮಿ ಪಕ್ಷ (ಎಎಪಿ) ಫೆ.13 ರಂದು ತನ್ನ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಸಭೆ ನಡೆಸಲಿದೆ.

ಗುಜರಾತ್, ಗೋವಾ ಮತ್ತು ಹರಿಯಾಣದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪಕ್ಷದ ಪಿಎಸಿ ಫೆ.13 ರಂದು ಸಭೆ ಸೇರಲಿದೆ ಎಂದು ಮೂಲ ಗಳು ತಿಳಿಸಿವೆ. ಎಎಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸಂದೀಪ್ ಪಾಠಕ್ ಅವರು ದಿಬ್ರುಗಢದಿಂದ ಮನೋಜ್ ಧನೋಹರ್, ಗುವಾ ಹಟಿಯಿಂದ ಬೆವೆನ್ ಚೌಧರಿ ಮತ್ತು ಸೋನಿತ್ಪುರದಿಂದ ರಿಷಿ ರಾಜ್ ಅವರ ಹೆಸರನ್ನು ಘೋಷಿಸಿದ್ದರು.

ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈಗಾಗಲೇ ಗುಜರಾತ್ನ ಭರೂಚ್ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ಯಾಗಿ ಚೈತಾರ್ ವಾಸವ ಅವರನ್ನು ಘೋಷಿಸಿದ್ದಾರೆ.

ದೆಹಲಿ, ಪಂಜಾಬ್, ಹರಿಯಾಣ, ಗುಜರಾತ್ ಮತ್ತು ಗೋವಾದಲ್ಲಿ ಸೀಟು ಹಂಚಿಕೆ ಕುರಿತು ಪಕ್ಷವು ಕಾಂಗ್ರೆಸ್ಸಿನೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಎಎಪಿ ನಾಯಕರು ಈ ಹಿಂದೆ ಹೇಳಿದ್ದರು.

Leave a Reply

Your email address will not be published. Required fields are marked *