Saturday, 14th December 2024

’ಲೋಕ’ ಚುನಾವಣೆ: ತಮಿಳುನಾಡು/ ವಾರಣಾಸಿಯಿಂದ ಮೋದಿ ಸ್ಪರ್ಧೆ…?

ನವದೆಹಲಿ: ಲೋಕಸಭೆ ಚುನಾವಣೆ(2024) ಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡು ಮತ್ತು ವಾರಣಾಸಿಯಿಂದ ಸ್ಪರ್ಧಿಸಬಹುದು ಎಂದು ಹೇಳಲಾಗುತ್ತಿದೆ.

ದಕ್ಷಿಣ ಭಾರತದಲ್ಲಿ ಪಕ್ಷವನ್ನು ಮುಂಚೂಣಿಗೆ ತರುವ ಉದ್ದೇಶದಿಂದ ಪ್ರಧಾನಿ ತಮಿಳು ನಾಡಿನಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೋದಿಯವರು ಕನ್ಯಾಕುಮಾರಿ ಯಿಂದ ಸ್ಪರ್ಧಿಸಿದರೆ, ಕಾಶಿ ಮತ್ತು ಕನ್ಯಾಕುಮಾರಿ ನಡುವಿನ ಬಲವಾದ ಸಾಂಸ್ಕೃತಿಕ ಸಂಬಂಧವು ಕಾರ್ಯರೂಪಕ್ಕೆ ಬರುತ್ತದೆ ಎಂಬುದು ಮತ್ತೊಂದು ಅಭಿಪ್ರಾಯ.

ಕಾಶಿ ಮತ್ತು ಕನ್ಯಾಕುಮಾರಿಯಿಂದ ಸ್ಪರ್ಧಿಸುವುದು ಪ್ರಧಾನಿ ಸ್ಥಾನಕ್ಕೆ ಸೂಕ್ತವಾಗಿರು ತ್ತದೆ ಎಂದು ಕೆಲವು ಅಭಿಪ್ರಾಯ ಪಟ್ಟಿದ್ದಾರೆ ಎಂದು ಬಿಜೆಪಿಯ ಆಪ್ತ ಮೂಲ ತಿಳಿಸಿದೆ. ಕನ್ಯಾಕುಮಾರಿ ಬದಲಿಗೆ ಕೊಯಮತ್ತೂರು ಕ್ಷೇತ್ರವನ್ನು ಪ್ರಧಾನಿ ಆಯ್ಕೆ ಮಾಡಿ ಕೊಳ್ಳುವ ಬಗ್ಗೆಯೂ ಊಹಾಪೋಹಗಳು ಹರಿದಾಡುತ್ತಿವೆ. ಕನ್ಯಾಕುಮಾರಿಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಬಿಜೆಪಿ ಅಭ್ಯರ್ಥಿ ಪೊನ್ ರಾಧಾಕೃಷ್ಣನ್ ಅವರು 2021 ರ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ನ ವಿಜಯ್ಕುಮಾರ್ ವಿರುದ್ಧ ನೇರಾನೇರಾ ಫೈಟ್ ಕೊಟ್ಟಿದ್ದರು.