ಹೀಗಾಗಿ ಎರಡು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಇಂದು 12 ಗಂಟೆಯವರೆಗೆ ಅವಕಾಶವಿತ್ತು. 72 ವರ್ಷಗಳ ನಂತರ ಮೂರನೇ ಬಾರಿಗೆ ಸ್ಪೀಕರ್ ಚುನಾವಣೆ ನಡೆಯುತ್ತಿದೆ.72 ವರ್ಷಗಳಲ್ಲಿ ಮೊದಲ ಬಾರಿಗೆ ಲೋಕಸಭಾ ಸ್ಪೀಕರ್(Lok Sabha Speaker) ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಎನ್ಡಿಎ ಅಭ್ಯರ್ಥಿಯಾಗಿ ಓಂ ಬಿರ್ಲಾ(Om Birla) ಹಾಗೂ ಇಂಡಿಯಾ ಒಕ್ಕೂಟ ಅಭ್ಯರ್ಥಿಯಾಗಿ ಕೆ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ.
ಲೋಕಸಭೆ ಸ್ಪೀಕರ್ ಹುದ್ದೆಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಎನ್ಡಿಎ ಮತ್ತು ಪ್ರತಿಪಕ್ಷ ಇಂಡಿಯಾ ಒಕ್ಕೂಟ ಒಮ್ಮತಕ್ಕೆ ಬಂದಿಲ್ಲ. ಹೀಗಾಗಿ ಎರಡು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಇಂದು 12 ಗಂಟೆಯವರೆಗೆ ಅವಕಾಶವಿತ್ತು. 72 ವರ್ಷಗಳ ನಂತರ ಮೂರನೇ ಬಾರಿಗೆ ಸ್ಪೀಕರ್ ಚುನಾವಣೆ ನಡೆಯುತ್ತಿದೆ.
ಈ ಹಿಂದೆ 1952 ಹಾಗೂ 1974ರಲ್ಲಿಯೂ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಸ್ವತಂತ್ರ ಭಾರತದಲ್ಲಿ 1952ರಲ್ಲಿ ಮೊಟ್ಟ ಮೊದಲ ಬಾರಿಗೆ ಜಿವಿ ಮಾಳವಂಕರ್ ಮತ್ತು ಶಂಕರ್ ಶಾಂತಾರಾಮ್ ನಡುವೆ ಸ್ಪೀಕರ್ ಹುದ್ದೆಗೆ ಚುನಾವಣೆ ಪೈಪೋಟಿ ಏರ್ಪಟ್ಟಿತ್ತು. ಆ ಬಳಿಕ 1976ರಲ್ಲಿ ತುರ್ತು ಪರಿಸ್ಥಿತಿ ಸಮಯದಲ್ಲಿ ಸ್ಪೀಕರ್ ಚುನಾವಣೆ ನಡೆದಿತ್ತು. ಆ ಸಮಯದಲ್ಲಿ ಬಲಿಗ್ರಾಮ ಭಗತ್ ಹಾಗೂ ಜಗನ್ನಾಥ ರಾವ್ ನಡುವೆ ಚುನಾವಣೆ ನಡೆದಿತ್ತು.
ಈಗ 2024ರಲ್ಲಿ ಮೂರನೇ ಬಾರಿಗೆ ಚುನಾವಣೆ ನಡೆಯಲಿದೆ. ಇಲ್ಲಿಯವರೆಗೆ ಪಕ್ಷ ಮತ್ತು ವಿರೋಧ ಪಕ್ಷಗಳ ಒಮ್ಮತದ ಮೇರೆಗೆ ಸ್ಪೀಕರ್ ನೇಮಕ ಮಾಡಲಾಗಿತ್ತು.