Saturday, 14th December 2024

ಕಲ್ಲು ತುಂಬಿದ ಲಾರಿ – ಶವ ವಾಹನ ಡಿಕ್ಕಿ: 18 ಮಂದಿ ಸಾವು

ನಾಡಿಯಾ: ಶವಸಂಸ್ಕಾರಕ್ಕೆಂದು ತೆರಳುತ್ತಿದ್ದ ವಾಹನ ಹಾಗೂ ಕಲ್ಲು ತುಂಬಿದ ಲಾರಿ ನಡುವೆ ಡಿಕ್ಕಿ ಸಂಭವಿಸಿ, 18 ಮಂದಿ  ಮೃತಪಟ್ಟು, 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಂಸಖಾಲಿ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ಘಟನೆ ನಡೆದಿದೆ.

ನಾಡಿಯಾ ಜಿಲ್ಲೆಯ ಫುಲ್ಬರಿ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರು, ಮಹಿಳೆಯ ಶವವನ್ನು ಅಂತ್ಯ ಸಂಸ್ಕಾರಕ್ಕೆಂದು ಮೆಟಾಡೋರ್​ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದ ರು ಎಂದು ವರದಿಗಳು ತಿಳಿಸಿವೆ.

ವಾಹನದ ಅತಿಯಾದ ವೇಗದಿಂದಾಗಿ ಶವ ಸಾಗಿಸುತ್ತಿದ್ದ ವಾಹನ ಕಲ್ಲು ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಸುದ್ದಿ ತಿಳಿಯು ತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಹಂಸಖಾಲಿ ಪೊಲೀಸರು ಗಾಯಾಳುಗಳನ್ನು ಶಕ್ತಿನಗರ ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.