Friday, 13th December 2024

ಗುಡಿಸಲಿನಲ್ಲಿ ಮಲಗಿದ್ದವರ ಮೇಲೆ ಹರಿದ ಲಾರಿ: 8 ಮಂದಿ ಸಾವು

ಅಮ್ರೇಲಿ: ಗುಡಿಸಲಿನಲ್ಲಿ ಮಲಗಿದ್ದವರ ಮೇಲೆ ಲಾರಿ ಹರಿದ ಪರಿಣಾಮ 8 ಮಂದಿ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗುಜರಾತ್‍ನ ಅಮ್ರೇಲಿ ಜಿಲ್ಲೆಯಲ್ಲಿ ಘಟನೆ ಸಂಭವಿಸಿದೆ. ಸೋಮಾವರ ಬೆಳಿಗ್ಗೆ ಬಾದಂಡ ಗ್ರಾಮದ ರಸ್ತೆ ಪಕ್ಕದ ಗುಡಿಸಲಿನ ಮೇಲೆ ಲಾರಿ ಹರಿದಿದ್ದು, ಮಲಗಿದ್ದ 8 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸರ್ವ್‍ಗುಂಡಲ ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ. ಲಾರಿಯಲ್ಲಿ ಕ್ರೇನ್ ಸೇರಿ ಹಲವು ವಸ್ತುಗಳನ್ನು ತುಂಬಿಕೊಂಡು ಹೋಗಲಾಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ಗುಡಿಸಲು ಹಾಗೂ ಪಕ್ಕದಲ್ಲಿ ಮಲಗಿದ್ದವರ ಮೇಲೆ ನುಗ್ಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ನಿರ್ಲಿಪ್‍ರೈ ತಿಳಿಸಿದ್ದಾರೆ.