Saturday, 14th December 2024

ಲಾರಿಗೆ ಡಿಕ್ಕಿ ಹೊಡೆದ ಟ್ರಕ್: ಚಾಲಕ ಸುಟ್ಟು ಭಸ್ಮ

ಹೈದರಾಬಾದ್: ಆಂಧ್ರ ಪ್ರದೇಶದ ಹೆದ್ದಾರಿಯೊಂದರಲ್ಲಿ ಲಾರಿಗೆ ಡಿಕ್ಕಿ ಹೊಡೆದ ಟ್ರಕ್ ಒಂದಕ್ಕೆ ಬೆಂಕಿ ಹತ್ತಿ ಕೊಂಡು, ಚಾಲಕ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾನೆ.

ಆಂಧ್ರಪ್ರದೇಶದ ವಿಜಯನಗರದ ಕೊಮರಡ ಮಂಡಲದ ಅರ್ಥಮ್ ಬಳಿಯ ಹೆದ್ದಾರಿಯಲ್ಲಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಟ್ರಕ್ ಒಂದು, ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಹೊತ್ತಿ ಕೊಂಡಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದಲ್ಲಿ ಲಾರಿ ಚಾಲಕ, 52 ವರ್ಷದ ಸಾಂಬಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಮೃತ ಸಾಂಬಯ್ಯ ಕುಳಿತಿದ್ದ, ಟ್ರಕ್ ಇದ್ದಕ್ಕಿದ್ದಂತೆ ಬೆಂಕಿ ಉಗುಳಿದೆ. ಡಿಕ್ಕಿ ಸಂಭವಿಸಿದ ನಂತರ ವಾಹನದ್ಲೇ ಸಿಲುಕಿಕೊಂಡ ಸಾಂಬಯ್ಯ, ಎಷ್ಟೇ ಪ್ರಯತ್ನಿಸಿದರು ಹೊರ ಬರಲು ಆಗದೇ, ಬೆಂಕಿಗೆ ಆಹುತಿ ಯಾಗಿದ್ದಾರೆ.

ಮೃತ ಸಾಂಬಯ್ಯ ಮೂಲತಃ ಆಂಧ್ರದ ಗುಂಟೂರು ಜಿಲ್ಲೆಯವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪಾರ್ವತಿಪುರಂ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.