Thursday, 3rd October 2024

ಗ್ಯಾಸ್ ಸಿಲಿಂಡರ್‌ಗಳ ಸ್ಫೋಟ: ಬಸ್‌ಗಳು ಬೆಂಕಿಗೆ ಆಹುತಿ

ಮಹಾರಾಷ್ಟ್ರ: ಪಿಂಪ್ರಿ-ಚಿಂಚ್‌ವಾಡ್‌ನ ತಥಾವಾಡೆ ಪ್ರದೇಶದಲ್ಲಿ ಗ್ಯಾಸ್ ಸಿಲಿಂಡರ್‌ಗಳಲ್ಲಿ ಸ್ಫೋಟಗೊಂಡ ಪರಿಣಾಮ ಭಾರಿ ಬೆಂಕಿ ಕಾಣಿಸಿ ಕೊಂಡಿದೆ.

6 ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಬೀಡುಬಿಟ್ಟಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

”ರಾತ್ರಿ 10:30 ರ ಸುಮಾರಿಗೆ ಘಟನೆ ಸಂಭವಿಸಿದ್ದು, ನಾಲ್ಕೈದು ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಅಗ್ನಿಶಾಮಕ ಇಲಾಖೆಯಿಂದ ನೀರಿನ ಟ್ಯಾಂಕರ್‌ಗಳನ್ನು ತಕ್ಷಣವೇ ಸ್ಥಳಕ್ಕೆ ರವಾನಿಸಲಾಯಿತು. ಸಿಬ್ಬಂದಿ ಬೆಂಕಿಯನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತಂದರು. ದೊಡ್ಡ ಪ್ರಮಾಣದ ಸ್ಫೋಟದ ಶಬ್ಧದಿಂದ ಸ್ಥಳೀಯರಲ್ಲಿ ಭಯ ಮೂಡಿದೆ ಎಂದು ಪಿಂಪ್ರಿ ಚಿಂಚ್‌ವಾಡ್ ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಇತ್ತೀಚೆಗೆ ಮಹಾರಾಷ್ಟ್ರದ ಗೋರೆಗಾಂವ್‌ನಲ್ಲಿರುವ ಜಿ+5 ಕಟ್ಟಡದಲ್ಲಿ ದೊಡ್ಡ ಪ್ರಮಾಣದ ಅಗ್ನಿ ಅವಘಡ ಸಂಭವಿಸಿತ್ತು.