ಲುಧಿಯಾನ: ಭದ್ರತೆ ಕಡಿಮೆಗೊಳಿಸಿದ ಒಂದು ವಾರದ ನಂತರ, ಪಂಜಾಬ್ನ ಶಿವಸೇನಾ ನಾಯಕ ಸಂದೀಪ್ ಥಾಪರ್, ಅಲಿಯಾಸ್ ಗೋರಾ(58) ಅವರು ಶುಕ್ರವಾರ ಮಧ್ಯಾಹ್ನ ಜನನಿಬಿಡ ರಸ್ತೆಯಲ್ಲಿ ತನ್ನ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಬಂದ ನಾಲ್ವರು ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ.
ಘಟನೆಯ ಸಿಸಿಟಿವಿ ದೃಶ್ಯ ನೋಡಿದರೆ ಆರೋಪಿಯು ಆಸ್ಪತ್ರೆಯಿಂದ ನಿರ್ಗಮಿಸುವಾಗ ಥಾಪರ್‌ನನ್ನು ಕಾಲ್ನಡಿಗೆಯಲ್ಲಿ ಹಿಂಬಾಲಿಸಿದ್ದಾನೆ. ಆಗ ದಾಳಿಕೋರರಲ್ಲಿ ಒಬ್ಬ ಕತ್ತಿಯಿಂದ ಥಾಪರ್ ತಲೆಯ ಮೇಲೆ ಪದೇ ಪದೇ ಹೊಡೆಯಲು ಪ್ರಾರಂಭಿಸಿದ್ದು, ಥಾಪರ್ ಕೈ ಜೋಡಿಸಿ ಬಿಟ್ಟು ಬಿಡಿ ಎಂದು ಅಂಗಾಲಾಚುತ್ತಿರುವುದು ಕಂಡು ಬಂತು. ಮತ್ತೊಬ್ಬ ನಿಹಾಂಗ್ ಕತ್ತಿಯಿಂದ ದಾಳಿ ಮುಂದುವರಿಸಿದಾಗ ಶಿವಸೇನಾ ಪಂಜಾಬ್ ನಾಯಕ ಸಮತೋಲನ ಕಳೆದುಕೊಂಡು ಸ್ಕೂಟರ್ ಸಮೇತ ರಸ್ತೆಯಲ್ಲಿ ಬಿದ್ದಿದ್ದಾರೆ.
ಥಾಪರ್‌ನ ಏಕಾಂಗಿ ಬಂದೂಕುಧಾರಿ ರಸ್ತೆಬದಿಯಲ್ಲಿ ನಡೆದು ಮೂಕ ಪ್ರೇಕ್ಷಕನಂತೆ ನೋಡುತ್ತಿದ್ದ. ಆತ ಥಾಪರ್ ಅವರನ್ನು ರಕ್ಷಿಸುವುದಾಗಲೀ ಅಥವಾ ದಾಳಿಕೋರರನ್ನು ಬೆನ್ನಟ್ಟುವ ಪ್ರಯತ್ನವನ್ನೂ ಮಾಡಲಿಲ್ಲ.
ಥಾಪರ್ ಅವರು ಸಂವೇದನಾ ಟ್ರಸ್ಟ್ ಎಂಬ ಎನ್ಜಿಒ ಕಚೇರಿಯಿಂದ ಸಿವಿಲ್ ಆಸ್ಪತ್ರೆ ಬಳಿ ತೆರಳಿದ ನಂತರ ಈ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳು ಗಂಭೀರವಾಗಿ ಗಾಯಗೊಂಡ ನಾಯಕನನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಸ್ಥಳೀಯ ದಯಾನಂದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಯಿತು.