ಮುಂಬೈ: ಆನ್‌ಲೈನ್ ಫುಡ್ ಡೆಲಿವರಿ ವಲಯದ ಕಂಪನಿ ಜೊಮ್ಯಾಟೊದ ಸಹ ಸಂಸ್ಥಾಪಕ ಮೋಹಿತ್ ಗುಪ್ತಾ ರಾಜೀನಾಮೆ ನೀಡಿದ್ದಾರೆ.
2020ರಲ್ಲಿ ಸಹ ಸಂಸ್ಥಾಪಕರಾಗಿದ್ದ ಗುಪ್ತಾ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದರು. ಎರಡು ವಾರದೊಳಗೆ ಜೊಮ್ಯಾಟೊದ ಮೂವರು ದಿಗ್ಗಜರು ರಾಜೀನಾಮೆ ಸಲ್ಲಿಸಿದ್ದಾರೆ. ತಂತ್ರಜ್ಞಾನ ಆಧಾರಿತ ಕಂಪನಿಗಳ ಷೇರು ದರ ಕುಸಿತದ ನಡುವೆ ಈ ಬೆಳವಣಿಗೆ ನಡೆದಿದೆ.
ಜೊಮ್ಯಾಟೊ ಷೇರು ದರ ಈ ವರ್ಷ 50%ಗೂ ಹೆಚ್ಚು ಇಳಿಕೆಯಾಗಿದೆ. ಮೋಹಿತ್ ಗುಪ್ತಾ ಕಳೆದ ನಾಲ್ಕೂವರೆ ವರ್ಷಗಳಿಂದ ಜೊಮ್ಯಾಟೊದಲ್ಲಿದ್ದರು. ಮಾಜಿ ಫುಡ್ ಡೆಲಿವರಿ ಮುಖ್ಯಸ್ಥ ರಾಹುಲ್ ಗಂಜೋ ಹಾಗೂ ಸಿದ್ಧಾರ್ಥ್ ಜವಾರ್ ಇತ್ತೀಚೆಗೆ ರಾಜೀ ನಾಮೆ ನೀಡಿದ್ದರು.