Friday, 13th December 2024

‘ಬಾಳಾ ಸಾಹೇಬಂಚಿ ಶಿವಸೇನೆ’ ಯೊಂದಿಗೆ ಮೈತ್ರಿ: ಮಹಾರಾಷ್ಟ್ರ ಬಿಜೆಪಿ

ಮುಂಬೈ: ‘ಬಾಳಾ ಸಾಹೇಬಂಚಿ ಶಿವಸೇನೆ’ ಯೊಂದಿಗೆ ಮೈತ್ರಿ ಮಾಡಿಕೊಂಡು 2024 ರ ಮಹಾರಾಷ್ಟ್ರ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಸ್ಪರ್ಧಿಸಲಿದೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್ ಬವಾನ್ಕುಲೆ ಘೋಷಿಸಿದ್ದಾರೆ.

‘ಏಕನಾಥ್ ಶಿಂಧೆ ಮತ್ತು ದೇವೇಂದ್ರ ಫಡ್ನವೀಸ್ ಅವರ ನಾಯಕತ್ವದಲ್ಲಿ ಚುನಾವಣೆ ನಡೆಯಲಿದೆ. ನಾವು 45 ಲೋಕಸಭಾ ಸ್ಥಾನಗಳು ಮತ್ತು 200 ಕ್ಕೂ ಹೆಚ್ಚು ವಿಧಾನಸಭಾ ಸ್ಥಾನಗಳನ್ನು ಗೆಲ್ಲಲು ಸಿದ್ಧರಿದ್ದೇವೆ ಎಂದು ಬವಾನ್ಕುಲೆ ಹೇಳಿದರು.