Saturday, 14th December 2024

ಲೋಕಸಭೆಯಿಂದ ಸಂಸದೆ ಮಹುವಾ ಮೊಯಿತ್ರಾ ಉಚ್ಛಾಟನೆ

ನವದೆಹಲಿ: ಹಣಕ್ಕಾಗಿ ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ ಗಂಭೀರ ಆರೋಪ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್​ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಛಾಟನೆ ಮಾಡಲಾಗಿದೆ. ನೈತಿಕ ಸಮಿತಿಯ ವರದಿಯನ್ನು ಸದನ ಅಂಗೀಕರಿಸಿತು.

ಅಧಿವೇಶನದ ಐದನೇ ದಿನ ಸಮಿತಿಯ ಅಧ್ಯಕ್ಷ ವಿನೋದ್​ ಸೋನ್ಕರ್​ ವರದಿಯನ್ನು ಸದನದ ಮುಂದಿಟ್ಟರು. ಮೊಯಿತ್ರಾ ವಿರುದ್ಧ ಲೋಕಸಭೆ ಸ್ಪೀಕರ್‌ಗೆ ಮೂರು ಶಿಫಾರಸುಗಳನ್ನು ಸಮಿತಿ ಮಾಡಿತ್ತು ಎಂದು ಮೂಲಗಳು ತಿಳಿಸಿವೆ.

”ಲೋಕಸಭೆ ಪೋರ್ಟಲ್‌ನ ಲಾಗಿನ್ ಸವಲತ್ತುಗಳನ್ನು ಅನಧಿಕೃತ ವ್ಯಕ್ತಿಗಳೊಂದಿಗೆ ಹಂಚಿಕೊಂಡಿದ್ದು ಮೊಯಿತ್ರಾ ಅವರ ‘ಅನೈತಿಕ ನಡವಳಿಕೆ’ ಮತ್ತು ‘ಸದನದ ಅವಹೇಳನ’ವಾಗಿದೆ. ‘ರಾಷ್ಟ್ರೀಯ ಭದ್ರತೆ’ ಮೇಲೆ ಇದರ ಪ್ರಭಾವದ ಕುರಿತು ಸಮಿತಿ ಉಲ್ಲೇಖಿಸಿದೆ.