Saturday, 14th December 2024

’ಮನ್ ಕೀ ಬಾತ್’ ಹೆಸರಿನಲ್ಲಿ ಪತ್ರಕರ್ತನಿಂದ ಹಣ ವಸೂಲಿ

ವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ಸರಣಿಯನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸುವುದಾಗಿ ಹೇಳಿ ಹಣ ಪಡೆಯುತ್ತಿದ್ದ ಮುಂಬಯಿ ಪತ್ರ ಕರ್ತನ ವಿರುದ್ಧ ಕ್ರೈಂ ಬ್ರ್ಯಾಂಚ್ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

ಅಲೋಕ್ ರಂಜನ್ ಕೃಪಾಶಂಕರ್ ಎಂಬಾತ ಆರೋಪಿ. ಈತ ತಾನು ಹೆಸರಾಂತ ಮಾಧ್ಯಮ ಸಂಸ್ಥೆಯೊಂದರ ಪ್ರಧಾನ ಸಂಪಾ ದಕ ಎಂದು ಹೇಳಿಕೊಳ್ಳುತ್ತಿದ್ದ. ಸೋಷಿಯಲ್ ಮೀಡಿಯಾಗಳಲ್ಲೂ ಹಾಗೇ ಬರೆದುಕೊಂಡಿದ್ದ. ಪ್ರಧಾನಿ ಮೋದಿ ಇದುವರೆಗೆ ನಡೆಸಿ ಕೊಟ್ಟ ಮನ್ ಕೀ ಬಾತ್ ಸರಣಿ ಪುಸ್ತಕ ರೂಪದಲ್ಲಿ ತರುತ್ತಿದ್ದೇನೆ. ಈ ಪುಸ್ತಕವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಬಿಡುಗಡೆ ಮಾಡುತ್ತಾರೆ ಎಂದು ಹೇಳುತ್ತಿದ್ದ. ಜಾಹೀರಾತು ನೋಡಿ, ಅಲೋಕ್ ಮಾತುಗಳನ್ನು ಕೇಳಿ ಹಲವರು ಹಣ ಕೊಟ್ಟಿದ್ದಾರೆ.

ಹೀಗೆ ಹಣಕೊಟ್ಟವರಲ್ಲಿ ಒಬ್ಬರಾದ ಬಿಜೆಪಿ ಕಾರ್ಯಕರ್ತ ಕೇಶವ್ ಸಿಂಗ್ ಪೊಲೀಸರಿಗೆ ದೂರು ಕೊಟ್ಟಿದ್ದರು.

4001 ರೂಪಾಯಿಯನ್ನು ದೇಣಿಗೆ ರೂಪದಲ್ಲಿ ಕೊಟ್ಟಿದ್ದ ಕೇಶವ್​ ಸಿಂಗ್​​ಗೆ, ಇನ್ನೂ ಹಲವರು ತನ್ನಂತೆ ಅಲೋಕ್​​ಗೆ ಹಣ ಕೊಟ್ಟಿದ್ದಾರೆ. ತುಂಬ ದಿನಗಳಿಂದಲೂ ಆತ ಇದೇ ಕೆಲಸ ಮಾಡುತ್ತಿದ್ದಾನೆ ಎಂಬುದು ಗೊತ್ತಾಗಿ, ಅನುಮಾನ ಬಂದು ಪೊಲೀಸ ರಿಗೆ ದೂರುಕೊಟ್ಟಿದ್ದಾರೆ.