Wednesday, 11th December 2024

ಕನ್ನಡಕವಿಲ್ಲದೆ ನ್ಯೂಸ್ ಪೇಪರ್ ಓದಕ್ಕಾಗಲ್ಲ, ರದ್ದಾಯಿತು ವಿವಾಹ !

ಲಖನೌ: ವರನಿಗೆ ಕನ್ನಡಕವಿಲ್ಲದೆ ನ್ಯೂಸ್ ಪೇಪರ್ ಓದಲು ಬರುವುದಿಲ್ಲವೆಂದೇ ವಿವಾಹ ರದ್ದಾಗಿದೆ.

ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಸದರ್​ ಕೊಟ್ವಾಲಿ ಪ್ರದೇಶದ ಜಮಾಲ್ಪುರ್ ಗ್ರಾಮದಲ್ಲಿ ನಿವಾಸಿ ಅರ್ಜುನ್ ಸಿಂಗ್​ ಅವರ ಪುತ್ರಿಗೆ ಬನ್ಶಿ ಗ್ರಾಮದ ನಿವಾಸಿ ಶಿವಂನೊಂದಿಗೆ ವಿವಾಹ ನಿಶ್ಚಯಿಸಲಾಗಿತ್ತು. ಜೂ.20ರಂದು ಮದುವೆ ಮುಹೂರ್ತ ಗೊತ್ತು ಮಾಡಿ, ಶಾಸ್ತ್ರವಾಗಿ ವರನಿಗೆ ವಧುವಿನ ಕುಟುಂಬ ಮೋಟಾರ್ ಸೈಕಲ್​ ಅನ್ನು ಉಡುಗೊರೆ ಕೊಟ್ಟಿತ್ತು.

ವಿವಾಹಕ್ಕೂ ಮೊದಲು ಶಿವಂ ಕನ್ನಡಕ ಹಾಕಿದ್ದನ್ನು ನೋಡಿರದ ವಧುವಿನ ಕುಟುಂಬಕ್ಕೆ ಮದುವೆಯ ದಿನ ಆತ ಕನ್ನಡಕ ಹಾಕಿ ಕೊಂಡಿದ್ದನ್ನು ನೋಡಿ ಅನುಮಾನ ಶುರುವಾಗಿದೆ. ವರನಿಗೆ ಕಣ್ಣಿನಲ್ಲಿ ತೊಂದರೆಯಿರಬಹುದು ಎಂದು ಅನುಮಾನದಲ್ಲಿ ಹಿಂದಿ ದಿನಪತ್ರಿಕೆಯನ್ನು ಕನ್ನಡಕ ಹಾಕಿಕೊಳ್ಳದೆಯೇ ಓದುವಂತೆ ಹೇಳಿದ್ದು, ಆತ ಓದುವಲ್ಲಿ ವಿಫಲನಾಗಿದ್ದಾನೆ. ಆಗ ಆತನ ದೃಷ್ಟಿ ಸರಿಯಿಲ್ಲ ಎನ್ನುವ ವಿಚಾರ ವಧುವಿನ ಕುಟುಂಬಕ್ಕೆಗೊತ್ತಾಗಿದೆ.

ವಿಚಾರ ತಿಳಿಯುತ್ತಿದ್ದಂತೆ ವಧು ಮದುವೆ ಸಾಧ್ಯವಿಲ್ಲ ಎಂದು ಹಠ ಹಿಡಿದಿದ್ದಾಳೆ. ಆಕೆಯ ಮಾತಿಗೆ ಒಪ್ಪಿ ಮದುವೆ ಕ್ಯಾನ್ಸಲ್ ಮಾಡಿದೆ. ಬೈಕ್ ಹಾಗೂ ಮದುವೆಗೆ ಖರ್ಚು ಮಾಡಿದ್ದ ಹಣವನ್ನು ವಾಪಸು ಕೊಡಲು ವರನ ಕುಟುಂಬ ಒಪ್ಪದ ಹಿನ್ನೆಲೆಯಲ್ಲಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.