Friday, 13th December 2024

ಬ್ಲಾಕ್‌ಚೈನ್ ಮೂಲಕ ಪುಣೆ ಜೋಡಿ ವಿವಾಹ

ಪುಣೆ: ದೇಶದಲ್ಲಿ ಇದೇ ಮೊದಲ ಬಾರಿಗೆ ಬ್ಲಾಕ್‌ಚೈನ್ ಮೂಲಕ ಪುಣೆ ಮೂಲದ ಜೋಡಿ ವಿವಾಹ ವಾಗಿದ್ದಾರೆ. ಪುಣೆಯ ಅನಿಲ್ ನರಸಿಪುರಂ ಮತ್ತು ಶ್ರುತಿ ನಾಯರ್ ವಿವಾಹವಾದವರು.

ನವೆಂಬರ್ 15, 2021 ರಂದು ಸಾಂಕ್ರಾಮಿಕ ರೋಗ ಕಾರಣದಿಂದಾಗಿ ಈ ಜೋಡಿ ಕಾನೂನುಬದ್ಧವಾಗಿ ಮದುವೆಯಾಗಿದ್ದರು. ಇದೀಗ ತಮ್ಮ ಸಂಬಂಧ ವನ್ನು ಮತ್ತಷ್ಟು ಗಟ್ಟಿಪಡಿಸಲು ತಮ್ಮ ಮದುವೆ ಯನ್ನು ಬ್ಲಾಕ್‌ಚೈನ್ ಮೂಲಕ ಅಧಿಕೃತವಾಗಿಸಿದ್ದಾರೆ.

ದಂಪತಿಯು ತಮ್ಮ ಲ್ಯಾಪ್‌ಟಾಪ್‌ಗಳ ಮುಂದೆ ಕುಳಿತು ಪ್ರತಿಜ್ಞೆ ವಿನಿಮಯ ಮಾಡಿಕೊಳ್ಳುತ್ತಿದ್ದರೆ, ಕುಟುಂಬಸ್ಥರು ಮತ್ತು ಸ್ನೇಹಿತರು ಗೂಗಲ್ ಮೀಟ್‌ನಲ್ಲಿ ವೀಕ್ಷಿಸಿದ್ದಾರೆ. ಇವರ ವಿವಾಹವನ್ನು ಡಿಜಿಟಲ್ ಪುರೋಹಿತ ಅನೂಪ್ ಪಕ್ಕಿ ನೆರವೇರಿಸಿದ್ದಾರೆ. 15 ನಿಮಿಷಗಳಲ್ಲಿ ವಿವಾಹೋತ್ಸವ ನೆರವೇರಿದೆ.

ಶೃತಿ ಮತ್ತು ತಾನು ಮದುವೆಯನ್ನು ಎಥೆರಿಯಮ್ ಸ್ಮಾರ್ಟ್ ಒಪ್ಪಂದದೊಂದಿಗೆ ಬ್ಲಾಕ್‌ಚೈನ್ ಅಧಿಕೃತಗೊಳಿಸಿದ್ದೇವೆ ಎಂದು ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.