Wednesday, 11th December 2024

ವರದಕ್ಷಿಣೆಯಾಗಿ “ಹಳೆಯ” ಪೀಠೋಪಕರಣ: ಮದುವೆ ರದ್ದು

ಹೈದರಾಬಾದ್: ವಧುವಿನ ಮನೆಯವರು ವರದಕ್ಷಿಣೆಯಾಗಿ “ಹಳೆಯ” ಪೀಠೋಪಕರಣಗಳನ್ನು ನೀಡಿದ್ದಾರೆ ಎಂಬ ಕಾರಣಕ್ಕೆ ವರ ಮದುವೆಯನ್ನೇ ರದ್ದುಗೊಂಡಿದೆ.
ಬಸ್ ಚಾಲಕನಾಗಿ ಕೆಲಸ ಮಾಡುತ್ತಿರುವ ವರ ಮದುವೆಗೆ ಬಾರದ ಹಿನ್ನೆಲೆಯಲ್ಲಿ ವಧುವಿನ ತಂದೆ ದೂರು ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಧುವಿನ ತಂದೆ, ನಾವು ವರನ ಮನೆಗೆ ಹೋದಾಗ ವರನ ಪೋಷಕರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು. ಅವರು ಬೇಡಿಕೆ ಇಟ್ಟಿದ್ದ ಸಾಮಾನುಗಳನ್ನು ನೀಡಿಲ್ಲ ಮತ್ತು ಪೀಠೋ ಪಕರಣಗಳು ಹಳೆಯದಾಗಿವೆ ಎಂದು ಅವರು ಹೇಳಿದರು ಎಂದು ದೂರಿದ್ದಾರೆ.
ವರನ ಕುಟುಂಬದವರು ವರದಕ್ಷಿಣೆಯಾಗಿ ಇತರ ವಸ್ತುಗಳ ಜೊತೆಗೆ ಪೀಠೋಪಕರಣಗಳನ್ನು ನಿರೀಕ್ಷಿಸಿದ್ದರು.
ಆದರೆ ಬಳಸಿದ ಪೀಠೋಪಕರಣಗಳನ್ನು ವಧುವಿನ ಮನೆಯವರು ನೀಡಿದ್ದರಿಂದ ಅದನ್ನು ತಿರಸ್ಕರಿಸಿದರು ಮತ್ತು ಮದುವೆಯ ದಿನದಂದು ಮದುವೆಗೆ ಬರಲಿಲ್ಲ ಎಂದು ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.