Saturday, 14th December 2024

ಏಳು ಬೃಹತ್ ಸಮಗ್ರ ಜವಳಿ ಪಾರ್ಕ್ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ

ನವದೆಹಲಿ:‌ ಏಳು ಬೃಹತ್ ಸಮಗ್ರ ಜವಳಿ ಪಾರ್ಕ್ʼಗಳನ್ನು ಸ್ಥಾಪಿಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವರಾದ ಅನುರಾಗ್ ಠಾಕೂರ್ ಮತ್ತು ಪಿಯೂಷ್ ಗೋಯಲ್ ಬುಧವಾರ ಘೋಷಿಸಿದ್ದಾರೆ.

ಯೋಜನೆಗೆ ಐದು ವರ್ಷಗಳಲ್ಲಿ ಒಟ್ಟು ₹4,445 ಕೋಟಿ ವೆಚ್ಚವಾಗಲಿದೆ. 2021ರ ಕೇಂದ್ರ ಬಜೆಟ್ʼನಲ್ಲಿ ಮೊದಲ ಬಾರಿಗೆ ಘೋಷಿಸಲಾದ ಪಿಎಂ-ಮಿತ್ರಾ ಯೋಜನೆಯನ್ನು ಜವಳಿ ಉದ್ಯಮವು ಜಾಗತಿಕವಾಗಿ ಸ್ಪರ್ಧಾತ್ಮಕವಾಗಲು, ದೊಡ್ಡ ಹೂಡಿಕೆ ಗಳನ್ನ ಆಕರ್ಷಿಸಲು, ಉದ್ಯೋಗ ಸೃಷ್ಟಿ ಮತ್ತು ರಫ್ತುಗಳನ್ನು ಹೆಚ್ಚಿಸಲು ಅನುವು ಮಾಡಿಕೊಡಲು ವಿನ್ಯಾಸ ಗೊಳಿಸಲಾಗಿದೆ.

ಯೋಜನೆಯಡಿ ಗ್ರೀನ್ ಫೀಲ್ಡ್ ಪಾರ್ಕ್ʼಗಳಿಗೆ ತಲಾ 500 ಕೋಟಿ ರೂ. ಮತ್ತು ಬ್ರೌನ್ ಫೀಲ್ಡ್ ಪಾರ್ಕ್ʼಗಳಿಗೆ 200 ಕೋಟಿ ರೂ.ಗಳ ಬೆಂಬಲವನ್ನು ಕೇಂದ್ರ ಒದಗಿಸಲಿದೆ. ಯೋಜನೆಯು 7 ಲಕ್ಷ ಜನರಿಗೆ ನೇರ ಉದ್ಯೋಗ ಮತ್ತು 14 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಗೋಯಲ್ ಹೇಳಿದರು.