Saturday, 14th December 2024

ಮೇಘಾಲಯ ಚುನಾವಣೆ ಮತ ಎಣಿಕೆ: ಎನ್‌ಪಿಪಿಗೆ ಸ್ಪಷ್ಟ ಮುನ್ನಡೆ

ಶಿಲ್ಲಾಂಗ್: ಮೇಘಾಲಯ ವಿಧಾನಸಭೆ ಚುನಾವಣೆ ಮತ ಎಣಿಕೆಯಲ್ಲಿ ಎನ್‌ಪಿಪಿ ಸ್ಪಷ್ಟ ಮುನ್ನಡೆ ಕಾಯ್ದು ಕೊಂಡಿದೆ.

ರಾಜ್ಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಸಹ ದಕ್ಷಿಣ ತುರಾ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿ ದ್ದಾರೆ. ಟಿಎಂಸಿ ಎನ್‌ಪಿಪಿಗೆ ಮೊದಲು ಪೈಪೋಟಿ ನೀಡಿತ್ತು. ಕಾನ್ರಾಡ್ ಸಂಗ್ಮಾ ಅವರು ಸಹ ದಕ್ಷಿಣ ತುರಾ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಟಿಎಂಸಿ ಎನ್‌ಪಿಪಿಗೆ ಮೊದಲು ಪೈಪೋಟಿ ನೀಡಿತ್ತು.

ಮೇಘಾಲಯ ರಾಜ್ಯದ ವಿಧಾನಸಭೆಯ ಒಟ್ಟು ಬಲ 60. ಆದರೆ 59 ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆದಿದೆ. ಬುಡಕಟ್ಟು ಮತ್ತು ಕ್ರೈಸ್ತ ಸಮುದಾಯದ ಪ್ರಾಬಲ್ಯವಿರುವ ಚಿಕ್ಕ ರಾಜ್ಯದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಮೈತ್ರಿಕೂಟ ಅಧಿಕಾರದಲ್ಲಿದೆ.

ಗುರುವಾರ ಮತ ಎಣಿಕೆ ಆರಂಭವಾಗಿದೆ. ಎನ್‌ಪಿಪಿ 26, ಬಿಜೆಪಿ ಮತ್ತು ಕಾಂಗ್ರೆಸ್ ತಲಾ 4, ಯುಡಿಪಿ 7 ಮತ್ತು ಟಿಎಂಸಿ 7 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದು ಕೊಂಡಿವೆ. ಎನ್‌ಪಿಪಿ 26 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದು ಸ್ಪಷ್ಟ ಬಹುಮತದತ್ತ ಸಾಗಿದೆ.