Saturday, 14th December 2024

2022ರ ವೇಳೆಗೆ ಮೆಟ್ರೊ ಮಾರ್ಗ 900 ಕಿ.ಮೀಗೆ ವಿಸ್ತರಣೆ: ಹರ್ದೀಪ್ ಸಿಂಗ್ ಪುರಿ

ನವದೆಹಲಿ: 2022ರ ವೇಳೆಗೆ ಮೆಟ್ರೊ ಮಾರ್ಗಗಳು ಸುಮಾರು 900 ಕಿ.ಮೀಗೆ ವಿಸ್ತರಣೆಯಾಲಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಶನಿವಾರ ತಿಳಿಸಿದರು. ದೇಶದ ವಿವಿಧ ನಗರಗಳಲ್ಲಿ ಪ್ರಸ್ತುತ ಸುಮಾರು 740 ಕಿ.ಮೀ ಮೆಟ್ರೊ ಮಾರ್ಗಗಳು ಕಾರ್ಯನಿರ್ವಹಿಸುತ್ತಿವೆ.

ದೆಹಲಿ ಮೆಟ್ರೊದ ‘ಗ್ರೇ ಲೈನ್‌’ ಭಾಗವಾಗಿರುವ ಸುಮಾರು 1 ಕಿ.ಮೀ ಉದ್ದದ ನಜಾಫ್‌ಗಡ- ಧಂಸಾ ಬಸ್‌ ನಿಲ್ದಾಣವನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿ ಮಾತನಾಡಿದರು.

ದೇಶದ ವಿವಿಧೆಡೆ 1,000 ಕಿ.ಮೀ ಮೆಟ್ರೊ ಮಾರ್ಗ ನಿರ್ಮಾಣ ಹಂತದಲ್ಲಿದೆ. ಬರುವ ವರ್ಷಗಳಲ್ಲಿ ಮಾರ್ಗದ ವ್ಯಾಪ್ತಿ 2,000 ಕಿ.ಮೀಗೆ ಹತ್ತಿರವಾಗಲಿದೆ. ಕೋವಿಡ್‌ ಸಮಯದಲ್ಲಿ ದೆಹಲಿ ಮೆಟ್ರೊ ಕೈಗೊಂಡ ಕೆಲಸಗಳನ್ನು ಶ್ಲಾಘಿಸಿ, ದೆಹಲಿಗೆ ಲಂಡನ್ ಮತ್ತು ನ್ಯೂಯಾರ್ಕ್‌ನಂತಹ ವಿಶ್ವದರ್ಜೆಯ ನಗರವಾಗುವ ಸಾಮರ್ಥ್ಯವಿದೆ ಎಂದು ಅಭಿಪ್ರಾಯಪಟ್ಟರು.