Sunday, 8th September 2024

ಕೊನೆಯ ಹಾರಾಟ ನಡೆಸಿದ ಮಿಗ್ -21 ಬೈಸನ್ ಯುದ್ಧ ವಿಮಾನ

ಜೈಪುರ: ಭಾರತೀಯ ವಾಯುಪಡೆಯ ಮಿಗ್ -21 ಬೈಸನ್ ಯುದ್ಧ ವಿಮಾನಕ್ಕೆ ವಿದಾಯ ಹೇಳಲಾಗಿದ್ದು, ಅದರ ಮೂರು ಸ್ಕ್ವಾಡ್ರನ್ ಗಳು ಮಂಗಳ ವಾರ ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಮೇಲೆ ಕೊನೆಯ ಬಾರಿಗೆ ಆಕಾಶದಲ್ಲಿ ಸಂಚರಿಸಿದವು.

ಈ ಸಂದರ್ಭದಲ್ಲಿ ಮಿಗ್ -21 ಬೈಸನ್ ಸು -30 ಎಂಕೆಐ ಜೊತೆಗೆ ಹಾರಾಟ ನಡೆಸಿತು.

ಉತ್ತರ್ಲೈ ಪ್ರದೇಶದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಎಲ್ಲಾ ಸೇವೆಗಳ ಸಿಬ್ಬಂದಿ ಉಪಸ್ಥಿತರಿದ್ದರು. ರಷ್ಯಾ ನಿರ್ಮಿತ ಐಕಾನಿಕ್ ಮಿಗ್ -21 ರ ಸ್ಕ್ವಾಡ್ರನ್ ಸುಮಾರು ಆರು ದಶಕಗಳ ಕಾಲ ಭಾರತಕ್ಕೆ ಸೇವೆ ಸಲ್ಲಿಸಿತು ಮತ್ತು ಈ ಅವಧಿಯಲ್ಲಿ ಭಾರತ-ಪಾಕಿಸ್ತಾನ ಸಂಘರ್ಷಗಳಲ್ಲಿ ದೇಶದ ವಾಯು ರಕ್ಷಣಾ ಸಾಮರ್ಥ್ಯದಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಬೀಳ್ಕೊಡುಗೆ ಸಮಾರಂಭವು ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯಿತು.ಬಾರ್ಮರ್ ಜಿಲ್ಲೆಯ ಮೇಲೆ ಕೊನೆಯ ಬಾರಿಗೆ ಆಕಾಶದಲ್ಲಿ ಸಂಚರಿಸಿ ದವು.

ಮಿಗ್-21ಗೆ ನೆಟ್ಟಿಗರು ಕೂಡ ಗೌರವ ನಮನ ಸಲ್ಲಿಸಿದರು. ವಿಮಾನಕ್ಕೆ ವಿದಾಯ ಹೇಳುವ ಪೋಸ್ಟ್ ಗಳಿಂದ ಸಾಮಾಜಿಕ ಮಾಧ್ಯಮಗಳು ತುಂಬಿದ್ದವು.

Leave a Reply

Your email address will not be published. Required fields are marked *

error: Content is protected !!