Wednesday, 11th December 2024

ಹಾಲಿನ ಬೆಲೆ ಪ್ರತಿ ಲೀಟರಿಗೆ 2 ರೂ. ಹೆಚ್ಚಳ ಇಂದಿನಿಂದ

ವದೆಹಲಿ : ಮದರ್ ಡೈರಿ ಪೂರ್ಣ ಕೆನೆ, ಟೋನ್ಡ್ ಮತ್ತು ಡಬಲ್ ಟೋನ್ಡ್ ಹಾಲಿನ ಬೆಲೆಯನ್ನ ಪ್ರತಿ ಲೀಟರ್ಗೆ 2 ರೂ.ಗಳಷ್ಟು ಹೆಚ್ಚಿಸಿದೆ. ಹೊಸ ಬೆಲೆಗಳು ಡಿಸೆಂಬರ್ 27 ಇಂದಿನಿಂದ ಅನ್ವಯವಾಗುತ್ತವೆ.

ಆದಾಗ್ಯೂ, ಹಸುವಿನ ಹಾಲು ಮತ್ತು ಟೋಕನ್ ಹಾಲಿನ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಇದು ಎರಡು ತಿಂಗಳಲ್ಲಿ ಹಾಲಿನ ದರದಲ್ಲಿ ಎರಡನೇ ಹೆಚ್ಚಳ ಮತ್ತು ಒಂದು ವರ್ಷದಲ್ಲಿ ಐದನೇ ಏರಿಕೆಯಾಗಿದೆ. ನವೆಂಬರ್’ ನಲ್ಲಿ ಮದರ್ ಡೈರಿ ದೆಹಲಿ-ಎನ್ಸಿಆರ್ ಮಾರುಕಟ್ಟೆಯಲ್ಲಿ ಪೂರ್ಣ ಕೆನೆಭರಿತ ಹಾಲಿನ ಬೆಲೆಯನ್ನ ಪ್ರತಿ ಲೀಟರ್ಗೆ 1 ರೂಪಾಯಿ ಮತ್ತು ಟೋಕನ್ ಹಾಲಿನ ಬೆಲೆಯನ್ನ ಪ್ರತಿ ಲೀಟರ್ಗೆ 2 ರೂ.ಗಳಷ್ಟು ಹೆಚ್ಚಿಸಿದೆ.