Saturday, 14th December 2024

ಕರೋನೋತ್ತರ ಆರೋಗ್ಯ ಸಮಸ್ಯೆ: ಸಚಿವ ಪೋಖ್ರಿಯಾಲ್‌ ಆಸ್ಪತ್ರೆಗೆ ದಾಖಲು

ನವದೆಹಲಿ : ಕರೋನೋತ್ತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿ ಯಾಲ್‌ ನಿಶಾಂಕ್‌ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

ಅವರನ್ನು ಬೆಳಿಗ್ಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಖಾಸಗಿ ವಾರ್ಡ್ ನಲ್ಲಿ ದಾಖಲಿಸಲಾಗಿದೆ. ಪೊಖ್ರಿಯಾಲ್ ಏಪ್ರಿಲ್ ನಲ್ಲಿ ಕರೋನಾ ವೈರಸ್ ಗೆ ತುತ್ತಾಗಿದ್ದರು. ಸದ್ಯ ಏಮ್ಸ್ ನ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕ ಡಾ.ನೀರಜ್ ನಿಶ್ಚಲ್’ರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸಚಿವರನ್ನು ಕೋವಿಡ್-19 ಚಿಕಿತ್ಸೆಯ ಸಮಯದಲ್ಲಿ ಏಪ್ರಿಲ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು, ಬಳಿಕ, ಅವರು ಆರೋಗ್ಯ ವಾಗಿದ್ದರೆಂದು ಘೋಷಿಸಲಾಯಿತು. ಸಚಿವರು ಚೇತರಿಸಿಕೊಂಡ ನಂತರ ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆಗಳಿಗೆ ಹಾಜರಾ ಗುತ್ತಿದ್ದರು.

೧೨ ನೇ ತರಗತಿ ಬೋರ್ಡ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಲಕ್ಷಾಂತರ ವಿದ್ಯಾರ್ಥಿಗಳು ಇಂದು ಪೊಖ್ರಿಯಾಲ್ ನಿಂದ ಮಾಹಿತಿ ಕೇಳಲು ನಿರೀಕ್ಷಿಸುತ್ತಿದ್ದರು.