Wednesday, 11th December 2024

ನೌಕಾಯಾನ ಸಚಿವಾಲಯ ಮರುನಾಮಕರಣ

ನವದೆಹಲಿ: ನೌಕಾಯಾನ ಸಚಿವಾಲಯಕ್ಕೆ ‘ಬಂದರು, ನೌಕಾಯಾನ ಮತ್ತು ಒಳನಾಡು ಜಲಸಾರಿಗೆ ಸಚಿವಾಲಯ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮರುನಾಮಕರಣ ಮಾಡಿದ್ದಾರೆ.

ಗುಜರಾತ್​ನ ಸೂರತ್​ ಹಾಗೂ ಸೌರಾಷ್ಟ್ರ ನಡುವಿನ ರೋ-ಪಾಕ್ಷ್ ದೋಣಿ ಸೇವೆ​ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಬಳಿಕ ಮಾತನಾಡಿ, ನೌಕಾಯಾನ ಸಚಿವಾಲಯದ ಹೆಸರನ್ನು ‘ಬಂದರು, ನೌಕಾಯಾನ ಮತ್ತು ಒಳನಾಡು ಜಲಸಾರಿಗೆ ಸಚಿವಾಲಯ’ ಎಂದು ಬದಲಾಯಿಸಲಾಗುತ್ತಿದೆ ಎಂದು ಹೇಳಿದರು.

ರೋ-ಪ್ಯಾಕ್ಷ್ ದೋಣಿ ಸೇವೆಯು ಸೂರತ್​​ನ ಹಜಿರಾ ಮತ್ತು ಸೌರಾಷ್ಟ್ರದ ಭಾವನಗರ ಜಿಲ್ಲೆಯ ಘೋಘಾ ಮಧ್ಯೆ ಸಂಪರ್ಕ ಕಲ್ಪಿಸ ಲಿದೆ. ಇದು ಸೂರತ್ ಮತ್ತು ಸೌರಾಷ್ಟ್ರ ನಡುವಿನ ಅಂತರವನ್ನು 317 ಕಿ.ಮೀ ನಿಂದ ಕೇವಲ 60 ಕಿ.ಮೀ ಕಡಿಮೆಗೊಳಿಸಲಿದೆ.