Sunday, 3rd November 2024

ಮಿರಾಜ್ 2000 ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ

ಮೊರೆನಾ: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಪತನಗೊಂಡ ಮಿರಾಜ್ 2000 ವಿಮಾನದ ಬ್ಲ್ಯಾಕ್ ಬಾಕ್ಸ್ ಮತ್ತು ಸುಖೋಯ್-30MKI ಜೆಟ್‌ನ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತೀಯ ವಾಯುಪಡೆಯ (ಐಎಎಫ್) ಎರಡು ಮುಂಚೂಣಿ ಯುದ್ಧ ವಿಮಾನಗಳು ಶನಿವಾರ ಮೊರೆನಾದಲ್ಲಿ ತರಬೇತಿ ಕಾರ್ಯಾಚರಣೆಯ ಸಮಯದಲ್ಲಿ ಪತನಗೊಂಡವು. ಇದರ ಪರಿಣಾಮ ವಾಗಿ ವಿಂಗ್ ಕಮಾಂಡರ್ ಒಬ್ಬರು ಸಾವನ್ನಪ್ಪಿದರು ಮತ್ತು ಇಬ್ಬರು ಪೈಲಟ್‌ಗಳು ಸುರಕ್ಷಿತ ರಾಗಿದ್ದಾರೆ.

ಎರಡೂ ವಿಮಾನಗಳ ಅವಶೇಷಗಳು ಜಿಲ್ಲೆಯ ಪಹಾರ್‌ಗಢ ಪ್ರದೇಶದಲ್ಲಿ ಬಿದ್ದಿವೆ ಎಂದು ಮೊರೆನಾ ಕಲೆಕ್ಟರ್ ಅಂಕಿತ್ ಅಸ್ಥಾನಾ ಶನಿವಾರ ಹೇಳಿದ್ದಾರೆ. ಮಧ್ಯಪ್ರದೇಶದ ಗಡಿಯಲ್ಲಿರುವ ರಾಜಸ್ಥಾನದ ಭರತ್‌ಪುರದಲ್ಲೂ ಕೆಲವು ಅವಶೇಷಗಳು ಬಿದ್ದಿವೆ ಎಂದು ಹೇಳಿದ್ದಾರೆ.

ಬ್ಲ್ಯಾಕ್ ಬಾಕ್ಸ್, ಅಥವಾ ಫ್ಲೈಟ್ ಡೇಟಾ ರೆಕಾರ್ಡರ್, ವಿಮಾನದಲ್ಲಿ ಇರಿಸಲಾದ ಎಲೆಕ್ಟ್ರಾನಿಕ್ ರೆಕಾರ್ಡಿಂಗ್ ಸಾಧನವಾಗಿದೆ ಮತ್ತು ವಿಮಾನ ಅಪಘಾತಗಳ ತನಿಖೆಯಲ್ಲಿ ಸಹಾಯ ಮಾಡುತ್ತದೆ.