Saturday, 14th December 2024

ಮಹಿಳೆ ಜತೆ ಅಸಭ್ಯ ವರ್ತನೆ: ಆರೋಪಿ ಬಂಧನ

ನವದೆಹಲಿ: ಮಹಿಳೆಯೊಬ್ಬರು ಡೈವರ್‌ನೊಂದಿಗೆ ಕಾರಿನಲ್ಲಿ ಮನೆ ತೆರಳುವಾಗ ಎದುರಿನಿಂದ ಬಂದ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಡಿಕ್ಕಿ ಹೊಡೆದು ಅಸಭ್ಯ ವರ್ತನೆ ಮಾಡಿದ ಘಟನೆ ಗುರುಗ್ರಾಮ್‌ನಲ್ಲಿ ನಡೆದಿದೆ.

ಗುರುಗ್ರಾಮ್‌ ಪ್ರದೇಶದ ವಜೀರಾಬಾದ್ ಟ್ರಾಫಿಕ್ ಸಿಗ್ನಲ್ ಬಳಿ ಎಸ್‌ ಯುವಿ ಕಾರಿನಲ್ಲಿ ಬಂದ ಅನ್ಸಲ್ ದೀಕ್ಷಿತ್ ಮಹಿಳೆಯ ಕಾರಿಗೆ ಅಪಘಾತ ನಡೆಸಿ ದ್ದಾರೆ. ಬಳಿಕ ಮಹಿಳೆಯ ಕಾರು ಚಾಲಕನೊಂದಿಗೆ ಗಲಾಟೆ ನಡೆದಿತ್ತು. ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಮಹಿಳೆ ಜೀವ ಬೆದರಿಕೆ ಒಡ್ಡಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟ ಬಳಿಕ ಕಾರನ್ನು ಜಪ್ತಿ ಮಾಡಿ, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ವಸಂತ್ ಕುಂಜ್ ಮೂಲದ ಅನ್ಸಲ್ ದೀಕ್ಷಿತ್(24) ಬಂಆಧಿತ ಆರೋಪಿ ಎಂದು ಗುರುತಿಸಲಾಗಿದೆ.