Saturday, 14th December 2024

ಮಿಷನ್ ಪೋಷಣ್ 2.0 ಘೋಷಣೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಯವ್ಯಯ ಮಂಡನೆಯಲ್ಲಿ ಆರೋಗ್ಯ ವಲಯಕ್ಕೆ 2.23.846 ಕೋಟಿ ರೂ ಹಣ ಮೀಸಲಿಟ್ಟಿದ್ದು, ‘ಮಿಷನ್ ಪೋಷಣ್ 2.0’ ಘೋಷಣೆ ಮಾಡಿದ್ದಾರೆ.

ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಸ್ಥ್ ಭಾರತ್ ಯೋಜನೆಗೆ 64,180 ಕೋಟಿ ರೂಪಾಯಿ ಅನುದಾನ, ಆರೋಗ್ಯಕ್ಕೆ 2.23.846 ಕೋಟಿ ಖರ್ಚು ಮಾಡಲು ಉದ್ದೇಶಿಸಿದ್ದೇವೆ. ರಾಷ್ಟ್ರೀಯ ಹೆಲ್ತ್ ಮಿಷನ್‌ಗೆ ಹೆಚ್ಚುವರಿಯಾಗಿ ನಿಧಿ ಮೀಸಲಿಡಲಾಗುವುದು ಹೇಳಿದ ಅವರು, ‘ಮಿಷನ್ ಪೋಷಣ್ 2.0’ ಘೋಷಣೆ ಮಾಡಿದರು.

ಆರೋಗ್ಯ ಕ್ಷೇತ್ರದ ಮೂಲಸೌಕರ್ಯಕ್ಕೆ ಅನುದಾನ ಹೆಚ್ಚಿಸಲಾಗುವುಗದು. ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದ ಮೇಲಿನ ಹೂಡಿಕೆ ಹೆಚ್ಚಳ ಮಾಡಲಾಗುತ್ತದೆ ಎಂದು ಹೇಳಿದರು.