Wednesday, 18th September 2024

2.25 ಲಕ್ಷ ಮೊಬೈಲ್ ನಂಬರ್ ನಿಷ್ಕ್ರಿಯ

ಪಾಟ್ನಾ: ನಕಲಿ ದಾಖಲೆಗಳ ಮೂಲಕ ಸಿಮ್ ಕಾರ್ಡ್ ಖರೀದಿಸಿ ಬಳಕೆ ಮಾಡುತ್ತಿದ್ದ ಆರೋಪದ ಮೇರೆಗೆ ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ದೂರಸಂಪರ್ಕ ಇಲಾಖೆ ಬರೊಬ್ಬರಿ 2.25ಲಕ್ಷ ಮೊಬೈಲ್ ನಂಬರ್ ಗಳನ್ನು ನಿಷ್ಕ್ರಿಯಗೊಳಿಸಿದೆ.
ಕೇಂದ್ರ ದೂರಸಂಪರ್ಕ ಇಲಾಖೆ (ಡಿಒಟಿ) ಮಾಹಿತಿ ನೀಡಿದ್ದು, ಬಿಹಾರ ಮತ್ತು ಜಾರ್ಖಂಡ್ನಲ್ಲಿ 2.25 ಲಕ್ಷ ಮೊಬೈಲ್ ಸಂಖ್ಯೆ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಈ ಪೈಕಿ ಬಹುಪಾಲು ಸಿಮ್ ಕಾರ್ಡ್ಗಳನ್ನು ನಕಲಿ ದಾಖಲೆಗಳ ಮೂಲಕ ಸಂಗ್ರಹಿಸಲಾಗಿದೆ ಎಂದು ಹೇಳಿದೆ. ಮಾತ್ರವಲ್ಲದೇ ಟೆಲಿಕಾಂ ಸೇವಾ ಪೂರೈಕೆದಾರರು 517 ಪಾಯಿಂಟ್ ಆಫ್ ಸೇಲ್ಸ್ (ಪಿಒಎಸ್) ಅನ್ನು ಕಪ್ಪು ಪಟ್ಟಿಗೆ ಸೇರಿಸಿದ್ದಾರೆ. ಅವರು ಸಿಮ್ ಕಾರ್ಡ್ಗಳನ್ನು ನೀಡುವಾಗ ಅನೈತಿಕ ಮತ್ತು ಕಾನೂನುಬಾಹಿರ ಅಭ್ಯಾಸಗಳಲ್ಲಿ ತೊಡಗಿಸಿ ಕೊಂಡಿರು ವುದು ಪ್ರಾಥಮಿಕವಾಗಿ ಕಂಡುಬಂದಿದೆ ಎಂದು ಹೇಳಿದೆ.
ಏಪ್ರಿಲ್ 2023ರಲ್ಲಿ ಎರಡೂ ರಾಜ್ಯಗಳಲ್ಲಿ 2.25 ಲಕ್ಷಕ್ಕೂ ಹೆಚ್ಚು ಮೊಬೈಲ್ ಸಂಖ್ಯೆ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಈ ಪೈಕಿ ಹೆಚ್ಚಿನ ಸಿಮ್ ಕಾರ್ಡ್ಗಳನ್ನು ಅಕ್ರಮ/ಅನೈತಿಕ ವಿಧಾನಗಳ ಮೂಲಕ ಸಂಗ್ರಹಿಸಲಾಗಿದೆ.

ಬಿಹಾರ ಮತ್ತು ಜಾರ್ಖಂಡ್‌ನ ಸುಮಾರು ಏಳು ಕೋಟಿ ಸಿಮ್ ಚಂದಾದಾರರ ಮುಖದ ಡೇಟಾವನ್ನು ವಿಶ್ಲೇಷಿಸಲಾಗಿದೆ ಮತ್ತು ಕಾರ್ಯಸಾಧ್ಯವಾದ ಗುಪ್ತಚರವನ್ನು ಸಂಗ್ರಹಿಸಲಾಗಿದೆ.