Friday, 13th December 2024

ಇಂದಿನಿಂದ ಅ.11ರವರೆಗೆ ಪ್ರಧಾನಿ ಮೋದಿ ಗುಜರಾತ್ ಪ್ರವಾಸ ಆರಂಭ

14,500 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆ ಗಳಿಗೆ ಚಾಲನೆ

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಅ.11ರವರೆಗೆ ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭ 14,500 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆ ಗಳಿಗೆ ಚಾಲನೆ ನೀಡಲಿದ್ದಾರೆ.

ಈ ಭೇಟಿಯ ಸಂದರ್ಭ, ಪ್ರಧಾನಿ ನರೇಂದ್ರ ಮೋದಿ ಅವರು ಮೆಹ್ಸಾನಾದ ಮೊಧೇರಾ ದಲ್ಲಿ ಹಲವಾರು ಯೋಜನೆಗಳಿಗೆ ಉದ್ಘಾ ಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಮೊಧೇರಾವನ್ನು ಭಾರತದ ಮೊದಲ 24×7 ಸೌರಶಕ್ತಿ ಚಾಲಿತ ಗ್ರಾಮ ಎಂದು ಪ್ರಧಾನಿ ಮೋದಿ ಘೋಷಿಸಲಿದ್ದಾರೆ. ಮೊಧೇರಾದಲ್ಲಿ ಸೂರ್ಯ ದೇವಾಲಯ ಟೌನ್ ಸೌರೀಕರಣ ಗೊಳಿಸುವ ಮೋದಿ ಅವರ ಆಸೆ ಈಡೇರಲಿದೆ.

ವಸತಿ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ 1,300 ಕ್ಕೂ ಹೆಚ್ಚು ಛಾವಣಿಯ ಸೌರ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಎಲ್ಲಾ ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಗೆ ಸಂಪರ್ಕ ಹೊಂದಿದೆ. ಈ ಯೋಜನೆಯಿಂದ ಸ್ಥಳೀಯ ಜನರು ತಮ್ಮ ವಿದ್ಯುತ್ ಬಿಲ್‌ ನಲ್ಲಿ ಶೇಕಡಾ 60 ರಿಂದ 100 ರಷ್ಟು ಉಳಿತಾಯ ಮಾಡುತ್ತಾರೆ ಎಂದು ಗುಜರಾತ್ ಸರ್ಕಾರ ಹೇಳಿದೆ. 2011 ರ ಜನಗಣತಿಯ ಪ್ರಕಾರ, ಬೆಚರಜಿ ತಾಲೂಕಿನ ಮೊಧೇರಾ ಗ್ರಾಮವು 6,373 ಜನಸಂಖ್ಯೆಯನ್ನು ಹೊಂದಿದೆ.

ತಮ್ಮ ಭೇಟಿಯ ಭಾಗವಾಗಿ ಪ್ರಧಾನಿ ಮೋದಿ ಅವರು ಸೋಮವಾರ ಬರೂಚ್, ಅಹಮದಾಬಾದ್ ಮತ್ತು ಜಾಮ್‌ನಗರದ ಅಮೋದ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದು, ಮರುದಿನ ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಲಿದ್ದಾರೆ. ನಂತರ ಮಧ್ಯಪ್ರದೇಶದ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸುವ ಮಹಾಕಾಲ್ ಲೋಕದ ಉದ್ಘಾಟನೆ ನಡೆಯಲಿದೆ.