Thursday, 12th December 2024

ಸೇನಾ ಸಮವಸ್ತ್ರದಲ್ಲಿ ಮೋದಿ: ಪ್ರಧಾನಿ ಕಚೇರಿಗೆ ನೋಟೀಸ್

#narendraModi

ಲಖನೌ/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೈನಿಕರನ್ನು ಭೇಟಿ ಮಾಡುವಾಗ ಸೇನಾ ಸಮವಸ್ತ್ರ ಧರಿಸಿದ್ದ ಬಗ್ಗೆ ಜಿಲ್ಲಾ ನ್ಯಾಯಾಲಯ ನೋಟೀಸ್ ಕಳುಹಿಸಿದೆ.

ಪ್ರಧಾನಿ ಸಮವಸ್ತ್ರ ಧರಿಸಿದ್ದ ಬಗ್ಗೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು. ಅದರಲ್ಲಿ, ಭಾರತೀಯ ದಂಡ ಸಂಹಿತೆಯಡಿಯಲ್ಲಿ ಸೈನಿಕರು, ನಾವಿಕರು, ಏರ್‌ಮ್ಯಾನ್ ಧರಿಸುವ ಅಥವಾ ಬಳಸಿರುವ ವಸ್ತ್ರಗಳನ್ನು ಧರಿಸುವುದು ಅಥವಾ ಟೋಕನ್ ಅನ್ನು ಒಯ್ಯುವುದು ಶಿಕ್ಷಾರ್ಹ ಅಪರಾಧ ವಾಗಿದೆ ಎಂದು ಉಲ್ಲೇಖಿಸಲಾಗಿದೆ.

ಕಳೆದ ವರ್ಷ ಪ್ರಧಾನಿ ಮೋದಿ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಂದರ್ಭ, ಭಾರತೀಯ ಸೇನಾ ಸಮವಸ್ತ್ರ ಧರಿಸಿ ಸೈನಿಕರನ್ನ ಭೇಟಿ ಮಾಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಉತ್ತರಪ್ರದೇಶದ ಪ್ರಯಾಗ್‌ ರಾಜ್‌ನ ಜಿಲ್ಲಾ ಕೋರ್ಟ್, ಪ್ರಧಾನಿ ಕಚೇರಿಗೆ ನೋಟೀಸ್ ಕಳುಹಿಸಿದೆ.