Friday, 13th December 2024

ಮೋದಿ ನಾಯಿಗಿಂತ ಕಡೆಯಾಗಿ ಸಾಯ್ತಾರೆ: ಕೈ ಮುಖಂಡನ ವಿವಾದ

ಮುಂಬೈ: ಪ್ರಧಾನಿ ಮೋದಿಯವರ ವಿರುದ್ಧ ಕೆಂಡ ಕಾರಿದ ಕಾಂಗ್ರೆಸ್ ನಾಯಕ ರೊಬ್ಬರು ಬಾಯಿಗೆ ಬಂದಂತೆ ನಾಲಿಗೆ ಹರಿಬಿಟ್ಟು ವಿವಾದಕ್ಕೀಡಾಗಿದ್ದಾರೆ.

ನಾಗ್ಪುರದಲ್ಲಿ ಪ್ರತಿಭಟನೆ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಶೇಖ್ ಹುಸೇನ್, ಪ್ರಧಾನಿ ಮೋದಿ ನಾಯಿಗಿಂತ ಕಡೆಯಾಗಿ ಸಾಯ್ತಾರೆ. ನಾಯಿಗೆ ಹೇಗೆ ಸಾವು ಬರುತ್ತೋ ಹಾಗೆ ಮೋದಿ ಸಾಯ್ತಾಣಗಪುರರೆ. ನನ್ನ ಹೇಳಿಕೆ ಬಗ್ಗೆ ನೋಟೀಸ್ ನೀಡಿದರೂ ನಾನು ಕೇರ್ ಮಾಡಲ್ಲ ಎಂದು ವಾಗ್ದಾಳಿ ನಡೆಸಿದ್ದರು. ಹುಸೇನ್ ಹೇಳಿಕೆ ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ನಾಯಕನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಶೇಖ್ ಹುಸೇನ್ ವಿರುದ್ಧ ಇದೀಗ ಗಿಟ್ಟಿಖಾಡನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆದರೆ ದೂರು ದಾಖಲಿಸಲು ಬಿಜೆಪಿ ನಾಯಕರು ಪೊಲೀಸ್‌ ಠಾಣೆಗೆ ತೆರಳಿದ್ದ ವೇಳೆ ಎಫ್‌ಐಆರ್‌ ದಾಖ ಲಿಸದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳ ಮೇಲೆ ಮಹಾರಾಷ್ಟ್ರದ ಮಹಾ ಅಘಾಡಿ ಸರ್ಕಾರದಿಂದ ಒತ್ತಡ ವಿತ್ತು ಎಂದು ಆರೋಪಿಸಲಾಗಿದೆ.

ಶೇಖ್‌ ಹುಸೇನ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ಮಾತನಾಡಲು ಯಾವುದೇ ನೈತಿಕತೆಯಿಲ್ಲ. ಈ ಹಿಂದೆ ಮೋದಿಯವರನ್ನೂ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಅದೇ ರೀತಿ ಈಗ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ರಾಹುಲ್‌ ಗಾಂಧಿಯವರ ವಿಚಾರಣೆ ಮಾಡುವ ಮೂಲಕ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ ಎಂದಿದ್ದಾರೆ.