Friday, 13th December 2024

ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆ

ತಿರುವನಂತಪುರಂ: ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ.

ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಂಕಿಪಾಕ್ಸ್ ಪ್ರಕರಣ ಖಚಿತಪಡಿಸಿದ್ದು, ಎಮಿರೇಟ್ಸ್‍ನಿಂದ ಜು.22ರಂದು ಆಗಮಿಸಿರುವ 30 ವರ್ಷದ ಮಲಪುರಂ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಸೋಂಕು ಪತ್ತೆಯಾಗಿದೆ.

ವ್ಯಕ್ತಿ ಕಾಚಿಕೋಡ ವಿಮಾನ ನಿಲ್ದಾಣದಿಂದ ಆಗಮಿಸಿದ್ದು, ಅವರ ಜೊತೆ ನಿಟಕ ಸಂಪರ್ಕ ಹೊಂದಿರುವವರ ಮೇಲೆ ನಿಗಾ ಇಡಲಾಗಿದೆ. ಮಲ್ಲಾಪುರಂ ಮಂಜರಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಕೇರಳದಲ್ಲಿ ಒಟ್ಟು 5 ಮಂದಿ ಮಂಕಿಪಾಕ್ಸ್‍ಗೆ ಸಿಲುಕಿದಂತಾಗಿ, ಒಬ್ಬರು ಮೃತಪಟ್ಟಿದ್ದಾರೆ.