Wednesday, 18th September 2024

12 ಸಾವಿರ ದಾಟಿದ ಕರೋನಾ ಪ್ರಕರಣ

ನವದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ಕಳೆದ 110 ದಿನಗಳ ಬಳಿಕ ಕೋವಿಡ್‌-19 ದೃಢಪಟ್ಟ ಹೊಸ ಪ್ರಕರಣಗಳ ಸಂಖ್ಯೆ 12 ಸಾವಿರಕ್ಕಿಂತ ಹೆಚ್ಚಾಗಿದೆ.

ಕಳೆದ ಫೆಬ್ರುವರಿ 24ರಂದು ದೇಶದಲ್ಲಿ 13,166 ಪ್ರಕರಣಗಳು ಪತ್ತೆಯಾಗಿದ್ದವು. ಗುರು ವಾರ ಬಿಡುಗಡೆಯಾಗಿರುವ ಮಾಹಿತಿ ಪ್ರಕಾರ, 12,213 ಹೊಸ ಪ್ರಕರಣಗಳು ವರದಿ ಯಾಗಿವೆ. ಬುಧವಾರ 8,822 ಹೊಸ ಪ್ರಕರಣಗಳು ಪತ್ತೆಯಾಗಿದ್ದವು.

ಕಳೆದ 24 ಗಂಟೆಗಳಲ್ಲಿ 7,624 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ ಚೇತರಿಸಿ ಕೊಂಡವರ ಸಂಖ್ಯೆ 4,26,74,712ಕ್ಕೆ ತಲುಪಿದೆ. ಇದೇ ಅವಧಿಯಲ್ಲಿ 11 ಮಂದಿ ಮೃತ ಪಟ್ಟಿದ್ದು, ಸಾವಿನ ಸಂಖ್ಯೆ 5,24,803ಕ್ಕೆ ಏರಿದೆ.

ಸದ್ಯ 58,215 ಸಕ್ರಿಯ ಪ್ರಕರಣಗಳು ಇವೆ. ಒಟ್ಟಾರೆ ಸೋಂಕು ಪ್ರಕರಣಗಳ ಶೇ 0.13ರಷ್ಟು ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ 4,024 ಜನರಲ್ಲಿ ಕೋವಿಡ್‌ ದೃಢಪಟ್ಟಿದೆ.

ದೆಹಲಿಯಲ್ಲಿ 1,375 ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ತಮಿಳುನಾಡಿನಲ್ಲಿ 476, ತೆಲಂಗಾಣದಲ್ಲಿ 205, ಗುಜರಾತ್‌ನಲ್ಲಿ 184 ಹಾಗೂ ಗೋವಾದಲ್ಲಿ 82 ಪ್ರಕರಣಗಳು ಕಂಡುಬಂದಿವೆ.