ಮುಂಬೈ/ನವದೆಹಲಿ: ಗುರುವಾರ ಭಾರತೀಯ ಷೇರುಪೇಟೆ ಭರ್ಜರಿ ಆರಂಭ ಪಡೆದಿದೆ. ಮುಂಬೈ ಷೇರು ಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಪಾಯಿಂಟ್ಸ್ ಜಿಗಿತಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 15 ಸಾವಿರ ಗಡಿದಾಟಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 510.62 ಪಾಯಿಂಟ್ ಏರಿಕೆಗೊಂಡು 50244.46 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 145.40 ಪಾಯಿಂಟ್ ಏರಿಕೆಗೊಂಡು 15009.90 ಕ್ಕೆ ಏರಿದೆ.
ಆರಂಭಿಕ ವಹಿವಾಟಿನಲ್ಲಿ ಸುಮಾರು 1,151 ಷೇರುಗಳು ಏರಿಕೆಗೊಂಡರೆ, 201 ಷೇರುಗಳು ಕುಸಿದವು, ಮತ್ತು 43 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಹಿಂಡಾಲ್ಕೊ ಷೇರು ಸುಮಾರು 7 ರೂ.ಗಳ ಏರಿಕೆ ಕಂಡು 369.85 ರೂ., ಆರ್‌ಐಎಲ್ 38 ರೂ. ಏರಿಕೆಗೊಂಡು 2,035.10 ರೂ, ಬಜಾಜ್ ಫೈನಾನ್ಸ್ ಷೇರುಗಳು ಸುಮಾರು 106 ರೂ.ಗಳ ಏರಿಕೆ ಕಂಡು 5,386.70 ರೂ., ಟಾಟಾ ಸ್ಟೀಲ್ ಷೇರುಗಳು ಸುಮಾರು 17 ರೂ.ಗಳ ಏರಿಕೆ ಕಂಡು 988.00 ರೂ., ಎಚ್‌ಡಿಎಫ್‌ಸಿ ಷೇರುಗಳು ಸುಮಾರು 41 ರೂ.ಗಳಿಂದ 2,618.40 ರೂ. ತಲುಪಿದೆ.