Wednesday, 11th December 2024

ಸಂಸದ ಅನ್ಸಾರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ, ಲೋಕಸಭಾ ಸದಸ್ಯತ್ವ ರದ್ದು

ವದೆಹಲಿ : ಭೂಗತ ಪಾತಕಿ ಮುಖ್ತಾರ್ ಅನ್ಸಾರಿ ಸಹೋದರ, ಬಹುಜನ ಸಮಾಜ ಪಕ್ಷದ ಸಂಸದ ಅಫ್ಜಲ್ ಅನ್ಸಾರಿಗೂ ಇದೇ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಬಿಜೆಪಿ ಶಾಸಕ ಕೃಷ್ಣಾನಂದ ರೈ ಹತ್ಯೆಗೆ ಸಂಬಂಧಿಸಿದ ಅಪಹರಣ ಮತ್ತು ಕೊಲೆ ಪ್ರಕರಣ ದಲ್ಲಿ ಈ ಸಹೋದರರು ಆರೋಪಿ ಗಳಾಗಿದ್ದರು.

ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾದ ಯಾವುದೇ ಸದಸ್ಯ ನನ್ನು ಸ್ವಯಂಚಾಲಿತವಾಗಿ ಅನರ್ಹ ಗೊಳಿಸಲಾಗುತ್ತದೆ ಎಂದು ಸಂಸತ್ತಿನ ನಿಯಮಗಳು ಹೇಳುವುದರಿಂದ ಅಫ್ಜಲ್ ಅನ್ಸಾರಿ ತನ್ನ ಲೋಕಸಭಾ ಸದಸ್ಯತ್ವವನ್ನ ಕಳೆದುಕೊಳ್ಳ ಲಿದ್ದಾರೆ.

2019ರ ಮಾನಹಾನಿ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ನಂತರ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮ್ಮ ಸಂಸದ ಸ್ಥಾನಮಾನ ಕಳೆದುಕೊಂಡಿದ್ದಾರೆ.